ಭಟ್ಕಳ ಮುಸ್ಲಿಮರು ಮೂಲತಃ ಜೈನರು: ಸಿ.ಟಿ.ರವಿ

ಭಟ್ಕಳ ಮುಸ್ಲಿಮರು ಮೂಲತಃ ಜೈನರು: ಸಿ.ಟಿ.ರವಿ

ಟ್ಕಳ: 'ಮತದ ಅಮಲು ಏರಿಸಿ ಕೊಂಡವರಿಗೆ ತಾವು ಯಾರು, ಎಲ್ಲಿ ದ್ದೇವೆ ಎಂದು ತಿಳಿಯವುದಿಲ್ಲ. ಭಟ್ಕಳದ ಮುಸ್ಲಿಂ ಸಮುದಾಯದವರು ಹಿಂದೂ, ಜೈನ್, ಸನಾತನ ಧರ್ಮದ ಮೂಲದವರು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತ ನಾಡಿದರು. 'ಭಟ್ಕಳದ ನಾಗ ಬನಕ್ಕೆ 800 ವರ್ಷಗಳ ಇತಿಹಾಸವಿದೆ. ಅಬ್ಬಬ್ಬಾ ಎಂದರೆ 300 ವರ್ಷ ಇತಿಹಾಸವುಳ್ಳ
ಭಟ್ಕಳ ಮುಸ್ಲಿಮರು ನಾಗಬನ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿರು ವುದು ವಿಪರ್ಯಾಸ' ಎಂದರು.

'ಕಾಂಗ್ರೆಸ್ ನಾಯಕರು ಕಿವಿ ಮೇಲೆ ಚೆಂಡು ಹೂವು ಇಟ್ಟುಕೊಂಡ ಚಿತ್ರಗಳನ್ನು ವಿಧಾನಸೌಧದ ಸುತ್ತಮುತ್ತ ಅಂಟಿಸಲಿ. ಇದು ಜನರಿಗೆ ಒಳ್ಳೆಯ ಮನರಂಜನೆ ನೀಡಲಿದೆ' ಎಂದು ಹೇಳಿದರು.