ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ; ಮಚ್ಚು ಬೀಸಿದ ಸಮೀರ್
ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಅನ್ಯಕೋಮಿನ ಯುವಕನೊಬ್ಬ ಮಚ್ಚು ಬೀಸಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಘಟನೆ ನಡೆದಿದೆ.
ಈ ಯಾತ್ರೆಯಲ್ಲಿ ಸುನೀಲ್ ಜೊತೆ ಸಮೀರ್ ತೆರಳಿದ್ದರು. ಈ ವೇಳೆ ಸುನೀಲ್ ಮೇಲೆ ಮಚ್ಚು ಬೀಸಿ ಸಮೀರ್ ಪರಾರಿಯಾಗಿದ್ದಾನೆ.ಸಾಗರದ ಬಿ.ಹೆಚ್ ರೋಡ್ ನಲ್ಲಿದ್ದ ಸಮೀರ್ ಜ್ಯುಪಿಟರ್ ಬೈಕ್ ನಲ್ಲಿ ಬಂದು ಸುನೀಲ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಮಚ್ಚಿನಿಂದ ಹೊಡೆದು ಹಲ್ಲೆ ಮಾಡಲು ಮುಂದಾಗಿದ್ದು, ಸುನೀಲ್ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ಕೊಲೆ ಯತ್ನದ ಘಟನೆ ಹೋಟೆಲ್ ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.