ಹಿಂದೂ ಪರಂಪರೆ ವಿರೋಧಿಸುವುದೇ ಕಾಂಗ್ರೆಸ್‌ ಕೆಲಸ: ಸಚಿವ ಪ್ರಹ್ಲಾದ ಜೋಷಿ

ಹಿಂದೂ ಪರಂಪರೆ ವಿರೋಧಿಸುವುದೇ ಕಾಂಗ್ರೆಸ್‌ ಕೆಲಸ: ಸಚಿವ ಪ್ರಹ್ಲಾದ ಜೋಷಿ

ಧಾರವಾಡ: ಹಿಂದೂ ಹಾಗೂ ಭಾರತೀಯ ಪರಂಪರೆ ವಿರೋಧಿಸುವುದೇ ಕಾಂಗ್ರೆಸ್‌ ಕೆಲಸವಾಗಿದ್ದು, ಆ ಪಕ್ಷದವರು ಆರಾಧಿಸುವ ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಇಟಲಿಯದ್ದೇ ಹೆಚ್ಚು ಧ್ಯಾನ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಇಟಲಿಯದ್ದೇ ಹೆಚ್ಚು ಧ್ಯಾನ. ಧ್ಯಾನ ಎಂದರೆ ಇಂಥದ್ದೇ ದೇವರನ್ನೇ ಧ್ಯಾನಿಸಬೇಕೆಂದಿಲ್ಲ.

ಕಾಂಗ್ರೆಸ್‌ನವರು ರಾಹುಲ್‌, ಸೋನಿಯಾ, ಪ್ರಿಯಾಂಕಾ ಗಾಂಧಿ ಆರಾಧನೆ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ. ಭಾರತೀಯ ಪರಂಪರೆ ಬಗ್ಗೆ ಗೌರವ ಇಲ್ಲದವರು ಭಗವದ್ಗೀತೆಯನ್ನು ವಿರೋಧಿಸಿದ್ದಾರೆ ಎಂದರು.