ರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಂಘಟನಾ ತರಬೇತಿ ಶಿಬಿರಕ್ಕೆ ರಾಜ್ಯದಿಂದ ನೀರಲಕೇರಿ ಆಯ್ಕೆ

ಕಾಂಗ್ರೆಸ ಪಕ್ಷದ ರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಂಘಟನಾ ತರಬೇತಿ ಶಿಬಿರಕ್ಕೆ ಕೆಪಿಸಿಸಿ ಸದಸ್ಯ ಹಾಗೂ ಮಾಧ್ಯಮ ವಿಶ್ಲೇಷಕರಾದ ಶ್ರೀ.ಪಿ. ಎಚ್. ನೀರಲಕೇರಿ ಅವರ ಹೆಸರನ್ನು ಅಂತಿಮ ಗೊಳಿಸಿ ಕೆಪಿಸಿಸಿ ಅಧ್ಯಕ್ಷ ಶ್ರೀ ಡಿ. ಕೆ. ಶಿವಕುಮಾರ್ ಎಐಸಿಸಿ ಗೆ ಶಿಫಾರಸು ಮಾಡಿದ್ದಾರೆ.ಎಐಸಿಸಿ ಹಮ್ಮಿಕೊಂಡಿರುವ ಈ ರಾಷ್ಟ್ರೀಯ ಶಿಬಿರ ಮಹಾರಾಷ್ಟ್ರದ ವರದಾ ನಗರದ ಸೇವಾಗ್ರಾಮ ಆಶ್ರಮದಲ್ಲಿ ನವೆಂಬರ 12 ರಿಂದ 3 ದಿನಗಳ ಕಾಲ ನಡೆಯಲಿದೆ. ಕರ್ನಾಟಕದಿಂದ 5 ಜನ ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಅದರಲ್ಲಿ ನೀರಲಕೇರಿ ಕೂಡ ಒಬ್ಬರಾಗಿದ್ದಾರೆ.