ದುಡಿಯಲು ಸಾಮರ್ಥ್ಯವಿರುವ ಪತಿ ಜೀವನಾಂಶ ಕೇಳಿದ್ರೆ ಅದು ಸೋಮಾರಿತನ - ಹೈಕೋರ್ಟ್

ಬೆಂಗಳೂರು: ದುಡಿಯಲು ಸಾಮರ್ಥ್ಯವಿರುವ ಪತಿ ಜೀವನಾಂಶ ಕೇಳಿದ್ರೆ ಅದು ಸೋಮಾರಿತನ ಅಂತ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ಬೆಂಗಳೂರಿನ ಕನಕಪುರ ರಸ್ತೆಯ ನಿವಾಸಿಯೊಬ್ಬರು ಕುಟುಂಬ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನೆ ಮಾಡಿದ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು, ಇದೇ ವೇಳೆ ನ್ಯಾಯಪೀಠ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ.
ಪತ್ನಿಯಿಂದ 2021ರ ಡಿಸೆಂಬರ್‌ನಿಂದ ವಿಚ್ಛೇದನ ಅರ್ಜಿ ಇತ್ಯರ್ಥವಾಗುವರೆಗೆ ಪತ್ನಿಗೆ ಮಾಸಿಕ 10 ಸಾವಿರ ರು. ಜೀವನಾಂಶ ಮತ್ತು ವ್ಯಾಜ್ಯ ವೆಚ್ಚಕ್ಕಾಗಿ 25 ಸಾವಿರ ರು. ಪಾವತಿಸುವಂತೆ ಪತಿಗೆ ನಿರ್ದೇಶಿಸಿ 2022ರ ಅ.31ರಂದು ಆದೇಶಿಸಿತ್ತು. ಪತ್ನಿಯಿಂದ ಜೀವನಾಂಶ ಕೋರಿದಕ್ಕೆ 10 ಸಾವಿರ ರು.ಗಳ ದಂಡವನ್ನು ವಿಧಿಸಿ ಆದೇಶ ಹೊರಡಿಸಿದ್ದರು.