ಶಿವಮೊಗ್ಗದ ನವುಲೆಯ ರಸ್ತೆಗೆ ಅಲಂಕಾರಿಕ ದೀಪ ಉದ್ಘಾಟನೆಗೊಳಿಸಿದ ಸಂಸದ ಬಿ.ವೈ ರಾಘವೇಂದ್ರ

ಶಿವಮೊಗ್ಗದ ನವುಲೆಯ ರಸ್ತೆಗೆ ಅಲಂಕಾರಿಕ ದೀಪ ಉದ್ಘಾಟನೆಗೊಳಿಸಿದ ಸಂಸದ ಬಿ.ವೈ ರಾಘವೇಂದ್ರ

ಶಿವಮೊಗ್ಗ : ಪಟ್ಟಣದ ಎಲ್ ಬಿ ಎಸ್ ನಗರದಿಂದ ಒಂದು ಕಿ. ಮೀ ಉದ್ದದಷ್ಟು ₹59 ಲಕ್ಷ ಮೊತ್ತದಲ್ಲಿ ರಸ್ತೆಯ ಮಧ್ಯ ಭಾಗದಲ್ಲಿ ಅಲಂಕಾರಿಕ ದೀಪದ ಉದ್ಘಾಟಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ವಿವಿಧ ಪಟ್ಟಣಗಳಿಗೆ ಅಲಂಕಾರಿಕ ಬೀದಿ ದೀಪವನ್ನು ಅಳವಡಿಸುವ ಕಾಮಗಾರಿಯನ್ನು ಕೆಶಿಪ್ ವತಿಯಿಂದ ನಿರ್ವಹಿಸಲು ಒಟ್ಟು ₹ 7.12 ಕೋಟಿಯಾಗಿರುತ್ತದೆ.

ಶಿಕಾರಿಪುರ ಶಿರಾಳಕೊಪ್ಪ ಮತ್ತು ಸೊರಬ ತಾಲೂಕಿನ ಅನವಟ್ಟಿಯಲ್ಲಿ ಕೂಡ ಇದೆ ಮಾದರಿಯಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗಿದೆ. 80 KM ಉದ್ದದ ರಸ್ತೆಗೆ 10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಟ್ರಾಫಿಕ್ ಕಂಟ್ರೋಲ್ ಇರುವ ಕಾಮಗಾರಿ ಪ್ರಾರಂಭವಾಗಲಿದೆ. ಅದರಲ್ಲಿ CCTV ವ್ಯವಸ್ಥೆ ಮತ್ತು ವಿದೇಶದ ಮಾದರಿಯಲ್ಲಿ ಈ ರಸ್ತೆಯನ್ನು ಜೊತೆಗೆ ನಮ್ಮ ಶಿವಮೊಗ್ಗವನ್ನು ಅಭಿವೃದ್ಧಿಮಾಡಲಾಗುವುದು ಎಂದು ಸಂಸದರಾದ ಬಿ. ವೈ ರಾಘವೇಂದ್ರ ತಿಳಿಸಿದರು.

ಕಾಂತೇಶ್ ಈಶ್ವರಪ್ಪ, ಮಹಾ ಪೌರರದ ಸುನಿತಾ ಅಣ್ಣಪ್ಪ, ಸೂ.ಡ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್, ಚನ್ನಪಸಪ್ಪ, ಬಳ್ಳಿಕೆರೆ ಸಂತೋಷ್, ಮಹಾನಗರ ಪಾಲಿಕೆಯ ಸದಸ್ಯರು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.