ಚೆನ್ನೈನ ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ನಡೆಯುತ್ತಿರುವ ಎಂಆರ್ಎಫ್ ಎಂಎಂಎಸ್ಸಿ ಎಫ್ಎಂಎಸ್ಸಿಐ ಇಂಡಿಯನ್ ನ್ಯಾಶನಲ್ ಕಾರ್ ರೇಸಿಂಗ್ ಚಾಂಪಿಯನ್ಶಿಪ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಖ್ಯಾತ ರೇಸರ್ ಕೆಇ ಕುಮಾರ್ ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹೈದರಾಬಾದ್: ಚೆನ್ನೈನ ಮದ್ರಾಸ್ ಇಂಟರ್ನ್ಯಾಶನಲ್ ಸರ್ಕ್ಯೂಟ್ನಲ್ಲಿ ನಡೆಯುತ್ತಿರುವ ಎಂಆರ್ಎಫ್ ಎಂಎಂಎಸ್ಸಿ ಎಫ್ಎಂಎಸ್ಸಿಐ ಇಂಡಿಯನ್ ನ್ಯಾಶನಲ್ ಕಾರ್ ರೇಸಿಂಗ್ ಚಾಂಪಿಯನ್ಶಿಪ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಖ್ಯಾತ ರೇಸರ್ ಕೆಇ ಕುಮಾರ್ ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
59 ವರ್ಷದ ಕೆಇ ಕುಮಾರ್ ದುರ್ಮರಣ ಹೊಂದಿದ್ದು ಇಂದು ಬೆಳಿಗ್ಗೆ ನಡೆದ ಸೆಲೂನ್ ಕಾರ್ ರೇಸ್ ವೇಳೆ ಕುಮಾರ್ ಅವರ ಕಾರಿಗೆ ಮತ್ತೊಂದು ಕಾರು ಅಡ್ಡ ಬಂದಿದ್ದರಿಂದ ಕಾರು ಟ್ರ್ಯಾಕ್ ನಲ್ಲಿ ಸ್ಕಿಡ್ ಆಗಿ ಬೇಲಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಕೆಲವೇ ನಿಮಿಷಗಳಲ್ಲಿ ಕುಮಾರ್ ಅವರನ್ನು ನಜ್ಜುಗುಜ್ಜಾಗಿದ್ದ ಕಾರಿನಿಂದ ಹೊರತೆಗೆದು ಟ್ರ್ಯಾಕ್ನ ವೈದ್ಯಕೀಯ ಕೇಂದ್ರದಲ್ಲಿ ಪ್ರಾಥಮಿಕ ತಪಾಸಣೆ ನಡೆಸಿದ ನಂತರ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.