"ನನ್ನ ಮುಂದಿನ ಹೊಣೆ ಏನು ಎಂಬುದನ್ನು ಖರ್ಗೆ ನಿರ್ಧರಿಸುತ್ತಾರೆ'

"ನನ್ನ ಮುಂದಿನ ಹೊಣೆ ಏನು ಎಂಬುದನ್ನು ಖರ್ಗೆ ನಿರ್ಧರಿಸುತ್ತಾರೆ'

ವದೆಹಲಿ: “ಪಕ್ಷದಲ್ಲಿ ನನ್ನ ಮುಂದಿನ ಪಾತ್ರ ಏನು ಹಾಗೂ ನನಗೆ ಯಾವ ಹೊಣೆ ನೀಡಲಾಗುತ್ತದೆ ಎಂಬುದನ್ನು ನೂತನ ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಲಿದ್ದಾರೆ,’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

“ಈ ಹಿಂದಿನಿಂದಲೂ ಕಾಂಗ್ರೆಸ್‌ನಲ್ಲಿ ಪಕ್ಷದ ಅಧ್ಯಕ್ಷರಿಗೆ ಪರಮ ಅಧಿಕಾರವಿದೆ. ಪಕ್ಷದ ಪ್ರತಿಯೊಬ್ಬರೂ ಅವರಿಗೆ ವರದಿ ಮಾಡುತ್ತಾರೆ.

ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರೇ ಆಯ್ಕೆಯಾದರೂ ಈ ಕ್ರಮ ಮುಂದುವರಿಯಲಿದೆ. ಖರ್ಗೆ ಅವರ ವಿಷಯದಲ್ಲೂ ಇದೇ ಆಗಲಿದೆ,’ ಎಂದರು.