KBC 13: ಜಯಾ ಬಚ್ಚನ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಶೋನಿಂದ ಹೋಗುವಂತೆ ಮನವಿ ಮಾಡಿದ Amitabh Bachchan

KBC 13: ಜಯಾ ಬಚ್ಚನ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಶೋನಿಂದ ಹೋಗುವಂತೆ ಮನವಿ ಮಾಡಿದ Amitabh Bachchan
ಅರಾಧಿ ಗುಪ್ತಾ ದೊಡ್ಡವನಾದ ಮೇಲೆ ಟಿವಿ ಪತ್ರಕರ್ತ ಆಗಬೇಕೆಂಬ ವಿಷಯ ಹೇಳಿಕೊಂಡನು. ಇಷ್ಟು ಮಾತು ನಡೆಯುತ್ತಲೇ ಸ್ಪರ್ಧಿ ಅರಾಧಿ, ನಾನು ನಿಮ್ಮ ಸಂದರ್ಶನ ಮಾಡಬಹುದಾ? ಅಂತ ಮನವಿ ಮಾಡಿಕೊಂಡನು. ಅದಕ್ಕೆ ಅಮಿತಾಬ್ ಬಚ್ಚನ್ ಸಹ ಒಪ್ಪಿಗೆ ಸೂಚಿಸಿ, ಕೇಳಿ ನಿಮ್ಮ ಪ್ರಶ್ನೆ ಅಂತ ಹೇಳಿದರು.
ಈ ವೇಳೆ ಅರಾಧಿ, ಅಮಿತಾಬ್ ಬಚ್ಚನ್ ಸ್ಟಾರ್ ಆಗಿದ್ದೇಗೆ? ಕೆಲಸ ಮತ್ತು ಮೊಮ್ಮಗಳು ಆರಾಧ್ಯ (Aaradhya Bachchan) ಬಗ್ಗೆಯೂ ಪ್ರಶ್ನೆ ಕೇಳಿದನು. ಅಮಿತಾಬ್ ಬಚ್ಚನ್ ಸಹ, ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಹೋದರು. ಕೊನೆಗೆ ಆರಾಧಿ ಕೇಳಿದ್ದು ಜಯಾ ಬಚ್ಚನ್ ಅವರ ಕುರಿತ ಪ್ರಶ್ನೆ.
ಸ್ಪರ್ಧಿ ಕೇಳಿದ ಪ್ರಶ್ನೆ ಏನು?
ನಿಮ್ಮ ಧ್ವನಿ (Amitabh Bachchan's Voice) ಅಲಕ್ಸಾನಲ್ಲಿ ರೆಕಾರ್ಡ್ ಆಗಿದೆ. ಮನೆಯಲ್ಲಿ ಜಯಾ ಆಂಟಿ, ಅಲೆಕ್ಸಾ ಎಸಿಯ ಸ್ವಿಚ್ ಆನ್ ಮಾಡು ಅಂತ ನಿರ್ದೇಶನ ನೀಡಿದ್ರೆ, ನೀವು ಓಕೆ ಮೇಡಂ ಎಂದು ಉತ್ತರಿಸುತ್ತೀರಾ ಎಂದು ಕೇಳಿದನು.
ಅಮಿತಾಬ್ ಬಚ್ಚನ್ ನೀಡಿದ ಉತ್ತರ ಹೀಗಿತ್ತು
ಈ ಪ್ರಶ್ನೆ ಕೇಳುತ್ತಿದ್ದಂತೆ ನಿಶಬ್ಧರಾದ ಅಮಿತಾಬ್ ಬಚ್ಚನ್ ಕುತೂಹಲಕರ ಉತ್ತರವನ್ನೇ ನೀಡಿದರು. ಮಿಸ್ಟರ್ ಟಿವಿ ಇಂಟರ್ ವ್ಯೂವರ್, ನಾನಿನ್ನು ನಿಮ್ಮ ಪ್ರಶ್ನೆಗಳನ್ನು ಎದುರಿಸಲಾರೆ. ದಯವಿಟ್ಟು ನೀವು ಮನೆಗೆ ತೆರಳಿ ಅಂತ ಹೇಳಿದ್ದರು. ಅಲೆಕ್ಸಾ( Alexa)ವನ್ನು ಮನೆಯಲ್ಲಿಯ ಎಸಿ ಜೊತೆ ಲಿಂಕ್ ಮಾಡಿರೋದಿಲ್ಲ. ನಾವೇ ಸ್ವಿಚ್ಛ್ ಆನ್ ಮಾಡಬೇಕು. ಹಾಗಾಗಿ ನೀವು ಹೇಳಿದಂತೆ ಮನೆಯಲ್ಲಿ ನಡೆಯಲ್ಲ ಎಂದು ನಗೆ ಚಟಾಕಿ ಹಾರಿಸಿದರು.
ಇದೇ ವೇಳೆ ಎತ್ತರವಾಗಿರುವ ಕಾರಣ ಮನೆಯಲ್ಲಿ ಫ್ಯಾನ್ (Fan) ಸ್ವಚ್ಛಗೊಳಿಸುತ್ತೀರಾ ಎಂದು ಕೇಳಲಾಯ್ತು, ಈ ಪ್ರಶ್ನೆಗೂ ನಗುತ್ತಲೇ ಉತ್ತರಿಸಿದ ಅಮಿತಾಬ್ ಬಚ್ಚನ್, ಆ ರೀತಿ ಏನು ಕೆಲಸ ಮಾಡಲ್ಲ ಎಂದು ಹೇಳುತ್ತಾ ನಕ್ಕರು.
ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಸುಧಾ ಮೂರ್ತಿ
ಸೀಸನ್ 11ರಲ್ಲಿ ಇನ್ಫೋಸಿಸಸ್ ಪ್ರತಿಷ್ಠಾನದ ಸುಧಾಮೂರ್ತಿ (Sudha murthy) ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ಕಾರ್ಯಕ್ರಮದ ಅಂತಿಮ ಸ್ಪರ್ಧಿಯಾಗಿ ಸುಧಾಮೂರ್ತಿ ಅವರು ಭಾಗವಹಿಸಿದ್ದರು. ಅದರಂತೆ ತಮ್ಮ ಜೀವನ ಅಮೂಲ್ಯ ಕ್ಷಣ, ಕಾಲೇಜ್ ಲೈಫ್ಗಳನ್ನು ವೀಕ್ಷಕರ ಮುಂದೆ ತೆರೆದಿಟ್ಟರು. ಅದರಲ್ಲೂ ಬಿಗ್ ಬಿ ಖುದ್ದು ವಯಸ್ಸಿನಲ್ಲಿ ತಮಗಿಂತಲೂ ಕಿರಿಯರಾದರೂ ಸುಧಾಮೂರ್ತಿ ಅವರ ಕಾಲಿಗೆ ನಮಸ್ಕರಿಸಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡುತ್ತಾ, "ಸುಧಾ ಮೂರ್ತಿ 60 ಸಾವಿರ ಲೈಬ್ರರಿಗಳು, ನೂರಾರು ಶಾಲೆಗಳು, 16 ಸಾವಿರಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಅವರ ಜೀವನವೇ ಸ್ಫೂರ್ತಿದಾಯಕ. ಯುವ ಪೀಳಿಗೆಗೆ ಆದರ್ಶ" ಎಂದು ಅಮಿತಾಭ್ ಬಚ್ಚನ್ ಹಾಡಿ ಹೊಗಳಿದರು. ಈ ಸ್ಪರ್ಧೆಯಲ್ಲಿ ಸುಧಾಮೂರ್ತಿಯವರು 25 ಲಕ್ಷ ರೂ. ಗೆದ್ದಿದ್ದರು.