ಕೋಲಾರ ಸಿದ್ದರಾಮಯ್ಯ ಸೇಫ್‌ ಅಲ್ಲ; ವರುಣಾದಲ್ಲಿ ನಿಲ್ಲೋದು ಉತ್ತಮ; ಸಿ.ಎಂ ಇಬ್ರಾಹಿಂ

ಕೋಲಾರ ಸಿದ್ದರಾಮಯ್ಯ ಸೇಫ್‌ ಅಲ್ಲ; ವರುಣಾದಲ್ಲಿ ನಿಲ್ಲೋದು ಉತ್ತಮ; ಸಿ.ಎಂ ಇಬ್ರಾಹಿಂ

ಬೆಂಗಳೂರು: ಕೋಲಾರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣೆ ಸ್ಪರ್ಧಿಸುವ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಿದ್ರೆ ಸೋಲುತ್ತಾರೆ. ಹೀಗಾಗಿ ಅವರಿಗೆ ಆ ಸೇಫ್‌ ಅಲ್ಲ, ವರುಣಾದಲ್ಲಿ ನಿಲ್ಲೋದು ಉತ್ತಮ ಎದಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಅವರನ್ನು ಮೋಸ ಮಾಡಲು ಕೋಲಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ಯಾವುದೇ ರೀತಿ ನೋಡಿದ್ರು ಗೆಲ್ಲುವ ಮಟ್ಟ ಕಾಣುತ್ತಿಲ್ಲ. ಅಲ್ಲಿ ಮುಸ್ಲಿಂ ಜಾತಿ ನೋಡಿ ವೋಟ್ ಹಾಕಲ್ಲ, ಸಿದ್ಧಾಂತ ನೋಡಿ ಮತ ಹಾಕೋರು ಇದ್ದಾರೆ ಎಂದರು. ಡಿಕೆಶಿ ಕೂಡ ಕನಕಪುರದಲ್ಲಿ ಸಿದ್ದರಾಮಯ್ಯ ಅವರನ್ನು ನಿಲ್ಲಿಸಬಹುದಿತ್ತು ತಾನೇ. ಡಿಕೆಶಿ ಸಿಎಂ ಆಗಲೂ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದರು.