ಮಾಂಜ್ರಾ ನದಿಯಲ್ಲಿ ಯುವಕನ ಹುಚ್ಚಾಟದ ಈಜು
ಬೀದರ್
ಮಹಾರಾಷ್ಟ್ರದಿಂದ ಭಾರಿ ನೀರು ಬಿಟ್ಟ ಕಾರಣ ತುಂಬಿ ಹರಿಯುತ್ತಿರುವ ಮಾಂಜ್ರಾ ನದಿ ಮೈದುಂಬಿಹರಿಯುತ್ತಿದ್ದು, ಔರಾದ್ ನ ಕೌಠಾ ಬಳಿಯ ಬ್ರಿಡ್ಜ್ನ ಸುಮಾರು 50 ರಿಂದ 60 ರ ಅಡಿ ಮೇಲಿಂದ ಜಿಗಿದು ಈಜಾಟ ನಡೆಸಿದ್ದಾರೆ. ಕೌಠಾ ಸೇತುವೆ ಮೇಲಿಂದ ನದಿಗೆ ಈಜಾಡಲು ಜಿಗಿಯುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈತನ ದುಸ್ಸಹಾಸ ಹಾಗೂ ಹುಚ್ಚಾಟಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಹೋದ ತಿಂಗಳು ಇದೇ ರೀತಿ ದುಸ್ಸಾಹಸ ಮೆರೆಯಲು ಕೈಹಾಕಿದ್ದ ಭಾಲ್ಕಿ ತಾಲ್ಲೂಕಿನ ಲಖನಗಾಂವ ಗ್ರಾಮದ ರೈತ ಜ್ಞಾನೇಶ್ವರ ನೀರು ಪಾಲಾಗಿದ್ದರು.