'ವಿಜಯನಗರ ಸಾಮ್ರಾಜ್ಯ' ರಕ್ಷಣೆ ಮಾಡಿದ್ದು ವಾಲ್ಮೀಕಿ ಸಮಾಜ : ಸಿಎಂ ಬೊಮ್ಮಾಯಿ
ದಾವಣಗೆರೆ : ವಿಜಯನಗರ ಸಾಮ್ರಾಜ್ಯ ರಕ್ಷಣೆ ಮಾಡಿದ್ದು ವಾಲ್ಮೀಕಿ ಸಮಾಜ. ಹೈದರ್ ಅಲಿಗೆ ಪಾಠ ಕಲಿಸಿದ್ದು ಮದಕರಿ ನಾಯಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ.
ಎಸ್ ಸಿ ಹಾಗೂ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇನೆ. ನನ್ನ ಉಸಿರು ಇರುವವರೆಗೂ ವಾಲ್ಮೀಕಿ ಸಮಾಜದ ಏಳಿಗೆಗಾಗಿ ದುಡಿಯುತ್ತೇನೆ. ವಾಲ್ಮೀಕಿ ಸಮಾಜವನ್ನು ಯಾರಿಂದಲೂ ಅಲುಗಾಡಿಸಲು ಆಗಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.