ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ:ಡಾ.ಶ್ರೀಶೈಲ್ ಹುದ್ದಾರ

ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ:ಡಾ.ಶ್ರೀಶೈಲ್ ಹುದ್ದಾರ

ಶಿಗ್ಗಾಂವಿ-ಇಂದಿನ ದಿನಗಳಲ್ಲಿ ದಲಿತರು ಹಿಂದುಳಿದವರು ಮುನ್ನೆಲ್ಲೆಗೆ ಬರಲು ಆ ಸಮುದಾಯದವರು ಶೈಕ್ಷಣಿಕವಾಗಿ ಜಾಗ್ರತರಾಗಬೇಕು ಎಂದು ಶಿಗ್ಗಾಂವಿಯ ಶ್ರೀ ರಂಭಾಪುರಿ ಪಧವಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶ್ರೀಶೈಲ ಹುದ್ಧಾರ ಹೇಳಿದರು.

ಪಟ್ಟಣದ ಸಂತೆ ಮೈಧಾನದಲ್ಲಿ ತಾಲೂಕ ಆಡಳಿತ ತಾಲೂಕ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತ ಸಂಘಟನೆಗಳ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ ಅವರ 131 ನೇ ಜಯಂತಿ ಹಾಗೂ ಬಾಬು ಜಗಜೀವನರಾಮ್ ಅವರ 115 ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಹನಮಂತ ಬಂಡಿವಡ್ಡರ ಇಂದಿನ ದಿನಗಳಲ್ಲಿ ನಮ್ಮ ಹಕ್ಕುಗಳನ್ನು ಹೋರಾಟದ ಮೂಲಕವೇ ಪಡೆಯುವಂತಹ ಸ್ಥಿತಿ ನೀರ್ಮಾಣವಾಗುತ್ತಿದೆ ಹಾಗಾಗಿ ದಲಿತರು ಹಿಂದುಳಿದವರು ಜಾಗ್ರತರಾಗಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಇಂದು ಪ್ರತಿಯೊಂದು ಕೆಲಸ ನಡೆಯಬೇಕಾದರು ಅದಕ್ಕೆ ಸಂವಿಧಾವೇ ಕಾರಣ ಅಂತಹ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ ಪಾತ್ರ ಮುಖ್ಯವಾದದ್ದು ಎಂದರು. ಪುರಸಬೆ ಸದಸ್ಯ ಮಂಜುನಾಥ ಬ್ಯಾಹಟ್ಟಿ ಮಾತನಾಡಿ ಅಂಬೇಡ್ಕರ ರಚಿಸಿದ ಸಂವಿಧಾನ ಕೇವಲ ಭಾರತಕ್ಕೆ ಮಾತ್ರ ಮಾದರಿಯಲ್ಲ ಅದು ಜಗತ್ತಿನ ಎಲ್ಲ ದೇಶಗಳು ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ ಕರೆಪ್ಪ ಕಟ್ಟಿಮನಿ,ವಿಶ್ವಸಾಥ ಬಂಡಿವಡ್ಡರ,ಶರೀಫ ಮಾಕಪ್ಪನವರ, ಮಂಜುನಾಥ ಹಾಗೂ ಇತರರನ್ನು ತಾಲೂಕ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್.ಸಿ ಎಸ್.ಟಿ ವಿಧ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮಕ್ಕೂ ಶಿಗ್ಗಾಂವಿಯಲ್ಲಿ ಪ್ರತಿಷ್ಠಾಪನೆ ಮಾಡಲು ತಂದಿರುವ ಅಂಬೇಡ್ಕರ ಮೂರ್ತಿಗೆ ರಾಕ್ ಗಾರ್ಢನ್ ನಲ್ಲಿ ಮಾಲಾರ್ಪಣೆ ಮಾಡಿ ನಂತರ ಶಿಗ್ಗಾಂವ ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್ ಅವರ ಭಾವಚಿತ್ರಗಳ ಮೆರವಣಿಗೆ ನಡೆಯಿತು.

ನಂತರ ಬಹು ದಿನಗಳ ಬೇಡಿಕೆಯಾದ ಅಂಬೇಡ್ಕರ ಪುತ್ತಳ್ಳಿ ನಿರ್ಮಾಣಕ್ಕೆ ತಾಲೂಕ ಆಡಳಿತದ ನೂತನ ಕಟ್ಟಡದ ಮುಂಬಾಗದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಶ್ರೀಮತಿ ರೂಪಾ ಬನ್ನಿಕೊಪ್ಪ ಅಧ್ಯಕ್ಷೀಯ ಮಾತುಗಳನ್ನಾಡಿದರು ಈ ಕಾರ್ಯಕ್ರಮದಲ್ಲಿ ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ, ದಲಿತ ಮುಖಂಡರಾದ ಕರೆಪ್ಪ ಕಟ್ಟಿಮನಿ, ಶಂಕರ ಇಂಗಳಗಿ, ಚಲವಾದಿ ಮಹಾಸಭಾ ಅಧ್ಯಕ್ಷ ಶಿವಾನಂದ ಹಾಗಲೂರ, ಹನಮಂತಪ್ಪ ಹರಿಜನ, ವೀರೇಶ ಕಾಳೆ, ಸಂತೋಷ ಕಟ್ಟಿಮನಿ, ಮುತ್ತು ಬನ್ನೂರ, ಸಂತೋಷ ದೊಡ್ಡಮನಿ, ಮಲ್ಲಿಕಾರ್ಜುನ ಹಡಪದ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಯ್ಯ ಚಿಕ್ಕಮಠ, ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರ ವರ್ಗದವರು ತಾಲೂಕಿನ ವಿವಿಧ ದಲಿತ ಸಂಘಟನೆಗಳ ಪಧಾದಿಕಾರಿಗಳು ಹಾಜರಿದ್ದರು ಚಿಕ್ಕಮಣಕಟ್ಟಿಯ ಜೋಡಿ ಬಸವೇಶ್ವರ ಜನಪದ ಕಲಾ ತಂಡದ ಕಲಾವಿದರು ಅಂಬೇಡ್ಕರ ಗೀತೆಗಳನ್ನು ಹಾಡಿದರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಸರಸ್ವತಿ ಘಜಕೋಶ ಸ್ವಾಗತಿಸಿದರು.