ಪುತ್ತೂರಿನಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ದುರ್ಮರಣ

ಪುತ್ತೂರಿನಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ದುರ್ಮರಣ

ಪುತ್ತೂರು : ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿ ನಡೆದಿದೆ.

ಮೃತನನ್ನು ಅಲಂಕಾರು ಗ್ರಾಮದ ರಾಜೇಶ್ ಪೂಜಾರಿ (43) ಎಂದು ಗುರುತಿಸಲಾಗಿದೆ.

ಗಾಂಧಿ ಪಾರ್ಕ್ ಸಮೀಪದ ಇಂಡಿಯನ್ ಟೈರ್ ಅಂಗಡಿಯಲ್ಲಿ ಟೈರ್ ಕೆಲಸ ಮಾಡುತ್ತಿದ್ದಾಗ ಏರ್ ಕಂಪ್ರೆಸರ್ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.