ಡೋಲು ಬಡಿಯುವುದನ್ನು ನಿಲ್ಲಿಸಿ ಎಂದ ಪೊಲೀಸರನ್ನೇ ತಳ್ಳಾಡಿದ ಯುವಕರು..!
ಹಾಸನ: ಕೊರೊನಾ ಹೆಚ್ಚಳದ ಆತಂಕದ ನಡುವೆಯೇ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಲಾಗಿದೆ. ಒಂದಷ್ಟು ಷರತ್ತುಗಳನ್ನ ವಿಧಿಸಿದ್ರು ಗಣೇಶೋತ್ಸವ ಆಚರಣೆ ವೇಳೆ ಈ ನಿಯಮಗಳನ್ನೆಲ್ಲಾ ಒಂದಷ್ಟು ಮಂದಿ ಮೀರಿದ್ದಾರೆ.
ಜಿಲ್ಲೆಯ ಸಕಲೇಶಪುರದಲ್ಲಿ ಗಣೇಶೋತ್ಸವದ ವೇಳೆ ಯುವಕರ ಗುಂಪೊಂದು ಪೊಲೀಸರನ್ನೇ ತಳ್ಳಾಡಿರುವ ಘಟನೆ ನಡೆದಿದೆ. ಗಣಪತಿ ವಿಸರ್ಜನೆ ವೇಳೆ ಡೋಲು ಬಡಿಯುತ್ತಾ ಯುವಕರ ಗುಂಪೊಂದು ಕುಣಿಯುತ್ತಾ ಇತ್ತು. ಇದನ್ನು ಗಮನಿಸಿ ಸಬ್ ಇನ್ಸ್ಪೆಕ್ಟರ್ ತಡೆಯಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿನ ಒಂದಷ್ಟು ಹುಡುಗರು ಡೋಲು ಬಡಿಯುವುದನ್ನ ನಿಲ್ಲಿಸದಂತೆ ಕುಮ್ಮಕ್ಕು ನೀಡಿದ್ದಾರೆ.
ಈ ವೇಳೆ ಸಬ್ ಇನ್ಸ್ಪೆಕ್ಟರ್ ಹಾಗೂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ರೊಚ್ಚಿಗೆದ್ದ ಯುವಕರು ಪೊಲೀಸನ್ನೇ ತಳ್ಳಾಡಿದ್ದಾರೆ. ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಈ ಕಂಪ್ಲೀಟ್ ದೃಶ್ಯ ಸೆರೆಯಾಗಿದೆ.