ಅಪಹರಣಕ್ಕೊಳಗಾದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಪೊಲೀಸರು
ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಕಾಸರಗೋಡಿನ ಅನ್ವರ್ (33) ಎಂಬ ಯುವಕನನ್ನು ಅಪಹರಣ ಮಾಡಲಾಗಿತ್ತು. ಹಾಸನದ ಗೊರೂರಿನ ಮೂಲಕ ಸಾಗುತ್ತಿದ್ದ ಅವರನ್ನು ಪೊಲೀಸರು ಹಿಡಿದಿದ್ದಾರೆ.ರಸ್ತೆಗೆ ಅಡ್ಡಲಾಗಿ ಜೆಸಿಬಿ, ಲಾರಿ ನಿಲ್ಲಿಸಿಕೊಂಡು ಸಿನೀಮಯ ರೀತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿದರು. ಲಾರಿ ನೋಡಿದ ಅಪಹರಣಕಾರರ ತಂಡ ಕಾರನ್ನು ನಿಧಾನಗೊಳಿಸಿದೆ.ಈ ಸಮಯದಲ್ಲಿ ಪೊಲೀಸರು ಕಾರಿನ ಹಿಂಬಾಗಿಲು ತೆಗೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪಹರಣಕಾರರು ಕಾರನ್ನು ಯೂ ಟರ್ನ್ ಮಾಡಿ ವೇಗವಾಗಿ ಚಲಿಸಿ ಕಾಪೌಂಡ್‌ಗೆ ಗುದ್ದಿದ್ದಾರೆ. ಪೊಲೀಸರು ಕಾರ್ಯಾಚರಣೆಯಿಂದ ಯುವಕನನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಿದ್ದ ಯುವಕನನ್ನು ಹಾಸನ ಪೊಲೀಸರು ಕಾಸರಗೋಡು ಪೊಲೀಸರು ವಶಕ್ಕೆ ಒಪ್ಪಿಸಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.