ಒಂದು ತಿಂಗಳಲ್ಲಿ 25 ರೈತರು ಆತ್ಮಹತ್ಯೆ: ರೈತರ ಸಮಸ್ಯೆಗೆ ಮೋದಿ ಏನು ಹೇಳ್ತಾರೆ ನೋಡೋಣ: ಕುಮಾರಸ್ವಾಮಿ
ವಿಜಯಪುರ: JDS ರಥಯಾತ್ರೆ ಹಿನ್ನೆಲೆಯಲ್ಲಿ ಹೆಚ್. ಡಿ ಕುಮಾರಸ್ವಾಮಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದೇ ವೇಳೆ ನಾಳೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಮೋದಿ ಭೇಟಿಗೆ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಹಕ್ಕು ಪತ್ರ ವಿತರಣೆ ಇದೊಂದು ನಾಟಕವಾಗಿದೆ ಅಷ್ಟೇ. ಏನೋ ಒಂದು ಕಾರ್ಯಕ್ರಮ ಮಾಡಬೇಕು ಮಾಡುತ್ತಿದ್ದಾರೆ. ರೈತರಿಗೆ ಮೋದಿ ಏನು ಸಂದೇಶ ಕೊಡುತ್ತಾರೆ ನೋಡೋಣ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನಪರ ಕೆಲಸ ಮಾಡುವ ಶಕ್ತಿ ಇಲ್ಲ. ಮೈತ್ರಿ ಸರ್ಕಾರದಲ್ಲಿ 8-10 ಸಭೆ ಮಾಡಿ ಕೆಲಸ ಮಾಡಿದ್ದೇವೆ. ಈಗ ಸ್ಕಾಡಾ ಯೋಜನೆ ಉದ್ಘಾಟನೆಗೆ ಮೋದಿ ಬರ್ತಿದ್ದಾರೆ ಎಂದು ಜಿಲ್ಲೆಯ ಕನ್ನೊಳ್ಳಿ ಕ್ರಾಸ್ನಲ್ಲಿ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.