ಬಾಲಿವುಡ್ ಖ್ಯಾತ ನಟ 'ಜಾವೇದ್ ಖಾನ್ ಅಮ್ರೋಹಿ' ಇನ್ನಿಲ್ಲ

ಬಾಲಿವುಡ್ ಖ್ಯಾತ ನಟ 'ಜಾವೇದ್ ಖಾನ್ ಅಮ್ರೋಹಿ' ಇನ್ನಿಲ್ಲ

ವದೆಹಲಿ: ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಹಿರಿಯ ನಟ ಜಾವೇದ್ ಖಾನ್ ನಿಧನರಾಗಿದ್ದಾರೆ. 70 ವರ್ಷದ ಜಾವೇದ್ ಅವರು ಫೆಬ್ರವರಿ 14 ರಂದು ಅಂದ್ರೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಈ ಹಿರಿಯ ನಟ 'ಅಂದಾಜ್ ಅಪ್ನಾ ಅಪ್ನಾ', 'ಲಗಾನ್', 'ಇಷ್ಕ್', 'ಹಮ್ ಹೈ ರಾಹಿ ಪ್ಯಾರ್ ಕೆ', 'ಚಕ್ ದೇ ಇಂಡಿಯಾ' ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಿನ್ನು 'ಲಗಾನ್', 'ಒನ್ಸ್ ಅಪಾನ್ ಎ ಟೈಮ್', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ಚಕ್ ದೇ ಇಂಡಿಯಾ' ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

ಜಾವೇದ್ ಖಾನ್ ಕೊನೆಯ ಬಾರಿಗೆ 2020ರಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಚಿತ್ರದ ಹೆಸರು 'ಸಡಕ್ 2'. ಜಾವೇದ್ ಖಾನ್ ಈ ಚಿತ್ರದಲ್ಲಿ ಪಾಕ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಆಲಿಯಾ ಭಟ್, ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಜಾವೇದ್ ಖಾನ್ ಅಮ್ರೋಹಿ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ಇದರೊಂದಿಗೆ, ಜಾವೇದ್ ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ಸ್ ಅಸೋಸಿಯೇಷನ್)ನ ಸಕ್ರಿಯ ಸದಸ್ಯರಾಗಿದ್ದರು.