ದೆಹಲಿಯ ಡಾಬಾವೊಂದರ 'ಫ್ರಿಡ್ಜ್' ನಲ್ಲಿ ಯುವತಿಯ ಮೃತದೇಹ ಪತ್ತೆ ; ಆರೋಪಿ ಬಂಧನ

ದೆಹಲಿಯ ಡಾಬಾವೊಂದರ 'ಫ್ರಿಡ್ಜ್' ನಲ್ಲಿ ಯುವತಿಯ ಮೃತದೇಹ ಪತ್ತೆ ; ಆರೋಪಿ ಬಂಧನ

ವದೆಹಲಿ : ಇಲ್ಲಿನ ನಜಾಫ್‌ಗಢ್‌ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ಡಾಬಾವೊಂದರಲ್ಲಿ ಯುವತಿಯನ್ನು ಕೊಲೆಗೈದು ಆಕೆಯ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಸಂಗ್ರಹಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕೊಲೆಯಾದ ಯುವತಿ ದೆಹಲಿಯ ಉತ್ತಮ್ ನಗರದ ನಿವಾಸಿಯಾಗಿದ್ದು, ಬಂಧಿತ ಆರೊಪಿಯನ್ನು ಸಾಹಿಲ್ ಗೆಹ್ಲೋಟ್ (26) ಎಂದು ಗುರುತಿಸಲಾಗಿದೆ.

ಈತ ಮಿತ್ರಾನ್ ಗ್ರಾಮದ ಹೊರವಲಯದಲ್ಲಿರುವ ತನ್ನ ಡಾಬಾದ ಫ್ರಿಡ್ಜ್‌ನಲ್ಲಿ ಬಾಲಕಿಯ ಮೃತದೇಹವನ್ನು ಬಚ್ಚಿಟ್ಟಿದ್ದು, ಈ ಬಗ್ಗೆ ಪತ್ತೆ ಹಚ್ಚಿದ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆದಿದ್ದರು.

ಬಂಧಿತ ಆರೋಪಿ ಮತ್ತು ಕೊಲೆಯಾದ ಯುವತಿ ಪರಸ್ಪರ ಸಂಬಂಧ ಹೊಂದಿದ್ದರಂತೆ. ತನ್ನ ಮದುವೆಯಾಗುವಂತೆ ಯುವತಿ ಒತ್ತಾಯಿಸಿದ್ದಳಂತೆ. ಇದಕ್ಕೆ ಒಪ್ಪದೆ ಆರೋಪಿ ಯುವತಿಯನ್ನು ಕೊಲೆಗೈದು ತನ್ನ ಡಾಬಾದಲ್ಲಿನ ಫ್ರಿಡ್ಜ್ ನಲ್ಲಿ ಇಟ್ಟಿದ್ದನು ಎಂದು ಪೊಲೀಸರು ಮಾಹಿತ ನೀಡಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.