ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

ಚಂದನವನದ ಸದ್ಯ ಹಾಟ್ ಟಾಪಿಕ್ ಅಂದ್ರೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ. ಇತ್ತೀಚೆಗೆ ಸೈಲೆಂಟ್ ಆಗಿ ಎಂಗೇಜ್ ಆಗಿದ್ದ ಸಿಂಹಪ್ರಿಯಾ ಜೋಡಿಯ ಮೊದಲ ಭೇಟಿ ಎಲ್ಲಿ? ತೆರೆಮರೆಯ ಕಹಾನಿಯೇನು? ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆಲ್ಲಾ ಉತ್ತರ ಇದೀಗ ಸಿಕ್ಕಿದೆ.
ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇವರಿಬ್ಬರ ಮೊದಲ ಭೇಟಿಯ ಕಥೆ ಇಲ್ಲಿದೆ. `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಅವರ ಭೇಟಿಯಾಗಿತ್ತು. ಇದಾದ ಬಳಿಕ ತೆಲುಗಿನ `ಎವರು’ ರಿಮೇಕ್ನಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದಾರೆ. ʻಎವರುʼ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದು, ಸಿಂಹಪ್ರಿಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾನೇ ಒಂದರ್ಥದಲ್ಲಿ ಪ್ರೀತಿಗೆ ತಿರುಗಲು ಕಾರಣ ಎಂದರೆ ತಪ್ಪಾಗಲಾರದು. ಬಳಿಕ ವಸಿಷ್ಠ ನಾಯಿಮರಿಯೊಂದನ್ನ ಗಿಫ್ಟ್ ಆಗಿ ಹರಿಪ್ರಿಯಾಗೆ ಕೊಟ್ಟಿದ್ದರು. ಹೀಗೆ ತಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾದ ನಂತರದಲ್ಲಿ ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡರು. 2023ರಲ್ಲಿ ಫೆಬ್ರವರಿ ಅಥವಾ ಮಾರ್ಚ್ನ ಶುಭ ಮುಹೂರ್ತದಲ್ಲಿ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿದ್ದಾರೆ.
ಇನ್ನೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟನೆಯ ಸಿನಿಮಾ ಮುಂದಿನ 2023ರಲ್ಲಿ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ರಿಲೀಸ್ ಜೊತೆ ಮದುವೆಯ ಗುಡ್ ನ್ಯೂಸ್ ಕೂಡ ಸಿಂಹಪ್ರಿಯ ಜೋಡಿ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ.