ಥಾಯ್ಲೆಂಡ್​ನಲ್ಲಿ 777ಚಾರ್ಲಿ ಕ್ರೇಜ್; ಡಿಸೆಂಬರ್ 1 ಕ್ಕೆ ರಿಲೀಸ್

ಥಾಯ್ಲೆಂಡ್​ನಲ್ಲಿ 777ಚಾರ್ಲಿ ಕ್ರೇಜ್; ಡಿಸೆಂಬರ್ 1 ಕ್ಕೆ ರಿಲೀಸ್

ರಕ್ಷಿತ್​ ಶೆಟ್ಟಿ ಅಭಿನಯದ ಮತ್ತು ನಿರ್ಮಾಣದ '777 ಚಾರ್ಲಿ' ಇನ್ನೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರವು ಥಾಯ್​ ಭಾಷೆಗೆ ಡಬ್​ ಆಗಿದ್ದು, ಡಿ. 1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮೂಲಕ ಕನ್ನಡ ಚಿತ್ರವೊಂದು ಥಾಯ್​ ಭಾಷೆಗೆ ಡಬ್​ ಆದ ಹೆಗ್ಗಳಿಕೆ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ಕಿದೆ. 777 ಚಾರ್ಲಿ’ ಚಿತ್ರವು ಜೂನ್​ 10ರಂದು ಭಾರತದಾದ್ಯಂತ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಿತ್ತು.