ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ.! ಬೆರಗಾಗಿಸುವಂತಿದೆ ʼಬೆಲೆʼ

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ.! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ 369 ಕೋಟಿ ರೂಪಾಯಿ ! ಅಪಾರ್ಟ್‌ಮೆಂಟ್ ಖರೀದಿ ಡೀಲ್‌ ದೇಶದಲ್ಲೇ ಅತ್ಯಂತ ದುಬಾರಿಯಾದುದು ಎನ್ನಲಾಗಿದೆ

ಸಮುದ್ರಕ್ಕೆ ಮುಖಮಾಡಿರುವ ಮೂರಂತಸ್ತಿನ ಐಷಾರಾಮಿ ಅಪಾರ್ಟ್‌ಮೆಂಟ್‌ ಇದಾಗಿದೆ. ಈ ಮೂರಂತಸ್ತಿನ ಅಪಾರ್ಟ್‌ಮೆಂಟ್‌ನ ಒಟ್ಟು ವಿಸ್ತೀರ್ಣ 27,160 ಚದರ ಅಡಿಯಾಗಿದ್ದು, ಇದನ್ನು ಜೆಪಿ ತಪರಿಯಾ ಕುಟುಂಬವು ಪ್ರತಿ ಚದರ ಅಡಿಗೆ 1.36 ಲಕ್ಷ ರೂಪಾಯಿ ದರಕ್ಕೆ ಖರೀದಿಸಿದೆ.

ಇದು ಸೂಪರ್ ಐಷಾರಾಮಿ ವಸತಿ ಗೋಪುರವಾದ ಲೋಧಾ ಮಲಬಾರ್‌ನಲ್ಲಿದ್ದು, 26, 27 ಮತ್ತು 28ನೇ ಮಹಡಿಗಳಲ್ಲಿ ಹರಡಿಕೊಂಡಿದೆ. 1.08 ಎಕರೆ ಪ್ರದೇಶದಲ್ಲಿ ಈ ವಸತಿ ಸಮುಚ್ಛಯ ಇದ್ದು, ಅರಬ್ಬಿ ಸಮುದ್ರ ಮತ್ತು ಹ್ಯಾಂಗಿಂಗ್ ಗಾರ್ಡನ್ಸ್ ನಡುವೆ ಇದೆ. ಈ ಅಪಾರ್ಟ್‌ಮೆಂಟ್‌ ಖರೀದಿಗೆ ತಪಾರಿಯಾ ಕುಟುಂಬ ಕೇವಲ ಸ್ಟ್ಯಾಂಪ್‌ ಡ್ಯೂಟಿಯಾಗಿಯೇ (ಮುಂದ್ರಾಂಕ ಶುಲ್ಕ) ಬರೋಬ್ಬರಿ 19.07 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.