ಕಾಂತಾರ' ಚಿತ್ರದ 'ವರಾಹಂ ರೂಪಂ' ಹಾಡಿಗೆ ನೃತ್ಯ ಮಾಡುತ್ತಿದ್ದಂತೆ ವಿದ್ಯಾರ್ಥಿ ಮೇಲೆ 'ದೈವದ ಆವಾಹನೆ'

ಕಾಂತಾರ' ಚಿತ್ರದ 'ವರಾಹಂ ರೂಪಂ' ಹಾಡಿಗೆ ನೃತ್ಯ ಮಾಡುತ್ತಿದ್ದಂತೆ ವಿದ್ಯಾರ್ಥಿ ಮೇಲೆ 'ದೈವದ ಆವಾಹನೆ'

ಬೆಂಗಳೂರು : 'ಕಾಂತಾರ' ಚಿತ್ರದ ಹಾಡಿಗೆ ನೃತ್ಯ ಮಾಡುತ್ತಿದ್ದಂತೆ ವಿದ್ಯಾರ್ಥಿ ಮೇಲೆ ದೈವ ಆವಾಹನೆಯಾಗಿದೆ ಎನ್ನಲಾದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹೊಂಬೇಗೌಡ ಪಿಯು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಕಾಂತಾರ ಚಿತ್ರದ ವರಹಂ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ದೈವ ಆವಾಹನೆಯಾಗಿದೆ ಎನ್ನಲಾಗಿದೆ.

ವಿದ್ಯಾರ್ಥಿ ಪಂಜುರ್ಲಿ ವೇಷ ಧರಿಸಿ ನೃತ್ಯ ಮಾಡುತ್ತಿದ್ದನು. ಈ ವೇಳೆ ದೈವ ಆವಾಹನೆಯಾಗಿದೆ ಎನ್ನಲಾಗಿದೆ. ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಹಾಡನ್ನು ನಿಲ್ಲಿಸಿ ವಿದ್ಯಾರ್ಥುಯನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಸಿನಿಮಾ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಇನ್ನೂ, ಕಾಂತಾರ ಸಿನಿಮಾದ ಹಾಡುಗಳಂತು ಸಿಕ್ಕಾಪಟ್ಟೆ ಸದ್ದು ಮಾಡಿದೆ.