ಶಾಲಾ ಮಕ್ಕಳ ಬಸ್‌ ರಿಪೇರಿ ಮಾಡಿಸಿ ಮಾನವೀಯತೆ ಮೆರೆದ PSI

ಶಾಲಾ ಮಕ್ಕಳ ಬಸ್‌ ರಿಪೇರಿ ಮಾಡಿಸಿ ಮಾನವೀಯತೆ ಮೆರೆದ PSI

ವಿಜಯಪುರ: ಕರ್ತವ್ಯ ನಿರತ ಪೊಲೀಸ್‌‌ ಅಧಿಕಾರಿಯೊಬ್ಬರು ಗಸ್ತು ತಿರುಗಲು ಬಂದಾಗ ಶಾಲಾ ಬಸ್‌‌ ಕೆಟ್ಟು ನಿಂತ ಹಿನ್ನೆಲೆ ಮಕ್ಕಳು ರಸ್ತೆ ಮೇಲೆ ಕುಳಿತಿರುವುದನ್ನು ನೋಡಿ ಮೆಕ್ಯಾನಿಕ್‌‌ ಅನ್ನು ಕರೆಯಿಸಿ ರಿಪೇರಿ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಗೋಕಾಕ್‌ ತಾ|ನ ಕೊಣ್ಣೂರಿನ ಶಾಂತಿ ಸಾಗರ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ಎಂದು ಬಸ್‌‌ನಲ್ಲಿ ವಿಜಯಪುರಕ್ಕೆ ಬಂದಿದ್ದರು. ಈ ವೇಳೆ ಬಸ್‌ ಕೆಟ್ಟು ನಿಂತಿತ್ತು. ಇದನ್ನು ಕಂಡ PSI ಖಾಜು ವಾಲಿಕಾರ ಬಸ್‌ ರಿಪೇರಿ ಮಾಡಿಸಿದ್ದಾರೆ.