ಶಿಥಿಲಾವಸ್ಥೆಗೆ ತಲುಪಿದ ಅಫಜಲಪುರದ ಸರ್ಕಾರಿ ಶಾಲೆ

ಶಿಥಿಲಾವಸ್ಥೆಗೆ ತಲುಪಿದ ಅಫಜಲಪುರದ ಸರ್ಕಾರಿ ಶಾಲೆ

ಕಲಬುರ್ಗಿ: ಜಿಲ್ಲೆಯ ಅಫಜಲಪುರ ತಾ|ನ ಆನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು, ಈ ಪೈಕಿ 8 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದೆ. ಶಾಲೆಯ ಗೋಡೆಗಳು ಆಗಾಗ ಕುಸಿದು ಬೀಳುತ್ತಿರುವುದರಿಂದ ವಿದ್ಯಾರ್ಥಿಗಳು ಜೀವ ಭಯದಲ್ಲೇ ತರಗತಿಯಲ್ಲಿ ಕೂರಬೇಕಾಗಿದೆ. ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.