ಹುಬ್ಬಳ್ಳಿ ರೈಲ್ವೆಯಲ್ಲಿ ಗನ್ ಪಾಯಿಂಟ್ ಮೇಲೆ ಕೆಲಸ ಮಾಡುತ್ತಿರುವ ರ್ಪರ ಕಾರ್ಮಿಕರು..!

ವಿಶ್ವದ ಅತೀ ದೊಡ್ಡ ರೈಲ್ವೆ ಪ್ಲಾಟ್‌ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ರೈಲ್ವೇ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ನಿತ್ಯ ಗನ್ ಪಾಯಿಂಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. ತ್ತಿಗೆದಾರರು ತಮ್ಮ ಗನ್ ಮ್ಯಾನ್ ಮುಂದಿಟ್ಟುಕೊಂಡು ಜೀವ ಬೆದರಿಕೆ ಹಾಕಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಿಂಗ್ಸ್ ಸೆಕ್ಯೂರಿಟಿ ಕಂಪೆನಿಯ ಗುತ್ತಿಗೆದಾರ ವಿನೀತ್ ತಿವಾರಿ ವಿರುದ್ದ ಪೌರಕಾರ್ಮಿಕರು ಆರೋಪ ಮಾಡಿದ್ದಾರೆ