"ನಾನು ಆ ಕೆಲಸ ಮಾಡ್ತಿದೆ ಎಂದರೆ ನನ್ನ ಮಕ್ಕಳಿಗೆ ಇಷ್ಟವಾಗದೆ ಇರಬಹುದು"

"ನಾನು ಆ ಕೆಲಸ ಮಾಡ್ತಿದೆ ಎಂದರೆ ನನ್ನ ಮಕ್ಕಳಿಗೆ ಇಷ್ಟವಾಗದೆ ಇರಬಹುದು"

'ನಾನು ಪೋರ್ನ್ ಸ್ಟಾರ್ ಆಗಿದ್ದೆ" ಎಂದರೆ ನನ್ನ ಮಕ್ಕಳಿಗೆ ಇಷ್ಟ ಆಗದೆ ಇರಬಹುದು ಎಂದು ನಟಿ ಸನ್ನಿ ಲಿಯೋನ್ ಹೇಳಿದ್ದಾರೆ. ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಮಕ್ಕಳು ಬೆಳೆಯುತ್ತಿದ್ದಾರೆ. ಮುಂದೆ ಅವರಿಗೆ ನಾನು ಈ ಹಿಂದೆ ನೀಲಿ ಚಿತ್ರ ತಾರೆಯಾಗಿದ್ದೆ ಎಂದು ಗೊತ್ತಾದರೆ ಇಷ್ಟ ಆಗದೆ ಇರಬಹುದು.

ಆದರೆ, ನಂತರ ಅವರಿಗೆ ನಾನು ಅದರ ಬಗ್ಗೆ ತಿಳಿ ಹೇಳುತ್ತೇನೆ ಎಂದಿದ್ದಾರೆ.

ಕೆನಡಾ ಮೂಲದ ಸನ್ನಿ ಲಿಯೋನ್ 2011 ರಲ್ಲಿ ಭಾರತೀಯ ಮೂಲದ ಡೇನಿಯಲ್ ವೆಬರ್ ಅವರನ್ನು ವಿವಾಹವಾದರು. ನಂತರ 2017 ರಲ್ಲಿ ಅವರು ಮಹಾರಾಷ್ಟ್ರದ ಲಾತೂರ್‌ನಿಂದ ಅನಾಥ ಹುಡುಗಿಯನ್ನು ದತ್ತು ಪಡೆದರು, ಆಕೆಗೆ ನಿಶಾ ಕೌರ್ ವೆಬರ್ ಎಂದು ಹೆಸರಿಟ್ಟರು. ಇದರ ನಂತರ, 2018 ರಲ್ಲಿ, ಸನ್ನಿ ಮತ್ತು ಡೇನಿಯಲ್ ಬಾಡಿಗೆ ತಾಯ್ತನದ ಮೂಲಕ 2 ಅವಳಿ ಗಂಡು ಮಕ್ಕಳ ಪೋಷಕರಾದರು, ಅವರಿಗೆ ಅವರು ಉಷರ್ ಮತ್ತು ನೋಹ್ ಎಂದು ಹೆಸರಿಸಿದರು. ಸನ್ನಿ ಲಿಯೋನ್ ಚಿತ್ರ ರಂಗಕ್ಕೆ ಕಾಲಿಡುವ ಮುನ್ನ ನೀಲಿ ಚಿತ್ರ ಜಗತ್ತಿನ ಖ್ಯಾತ ಸ್ಟಾರ್ ಆಗಿದ್ದರು. ಅವರು ನಟಿಸಿದ ಹಲವಾರು ನೀಲಿ ಚಿತ್ರಗಳು ಇಂದಿಗೂ ಇಂಟರ್ ನೆಟ್ ನಲ್ಲಿ ಹರಿದಾಡ್ತಿವೆ.