ನ. 11ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ: ರಸ್ತೆಗೆ ಡಾಂಬರು ಹಾಕಲು ಟ್ರಾಫಿಕ್​ ನಿಯಂತ್ರಿಸುವಂತೆ ಪೊಲೀಸರಿಗೆ ಮನವಿ: ತುಷಾರ್ ಗಿರಿನಾಥ್

ನ. 11ಕ್ಕೆ ರಾಜ್ಯಕ್ಕೆ ಪ್ರಧಾನಿ ಮೋದಿ: ರಸ್ತೆಗೆ ಡಾಂಬರು ಹಾಕಲು ಟ್ರಾಫಿಕ್​ ನಿಯಂತ್ರಿಸುವಂತೆ ಪೊಲೀಸರಿಗೆ ಮನವಿ: ತುಷಾರ್ ಗಿರಿನಾಥ್

ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯಕ್ಕೆ ಆಗಮಿಸಿಲಿದ್ದಾರೆ. ಈ ವೇಳೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​​ನಲ್ಲಿ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಮಾಡಲಿದ್ದಾರೆ.ಹಾಗಾಗಿ ಮೆಜಿಸ್ಟಿಕ್​ ಏರಿಯಾದ ರಸ್ತೆಗೆ ಡಾಂಬರ್​ ಮತ್ತು ರಸ್ತೆ ವೈಟ್ ಟಾಪಿಂಗ್ ಮಾಡುವುದಕ್ಕೆ ನಗರ ಸಂಚಾರಿ ಪೊಲೀಸರಿಗೆ 20 ದಿನ ಕಾಲಾವಕಾಶ ಕೇಳಿದ್ದೆವು. ಅಥವಾ 7 ದಿನ ಹಗಲು, 8 ದಿನ ರಾತ್ರಿಯಾದರೂ ಪರ್ಮಿಷನ್ ನೀಡುವಂತೆ ಕೇಳಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದರು. ಟ್ರಾಫಿಕ್ ಡೈವರ್ಟ್ ಮಾಡುವುದು ಕಷ್ಟ ಎಂದು ತಿಳಿಸಿದ್ದರು. ಆದರೆ ಈಗ ವಿಐಪಿ ಭೇಟಿ ಇರುವುದರಿಂದ ರಸ್ತೆ ಕಾಮಗಾರಿ ಮಾಡುವಂತೆ ತಿಳಿಸಿದ್ದಾರೆ.