ಊರ್ವಶಿ ಚಿತ್ರಮಂದಿರದಲ್ಲಿ ಗಂಧದಗುಡಿ ಟಿಕೆಟ್ ವಿಚಾರವಾಗಿ ಗೊಂದಲ; ಮೊದಲ ಶೋ ರದ್ದು!

ಬೆಂಗಳೂರು: ಪುನೀತ್ ರಾಜ್ಕುಮಾರ್ ನಟನೆಯ ಗಂಧದಗುಡಿ ಸಿನಿಮಾ ಇನ್ನಷ್ಟು ಜನರನ್ನು ತಲುಪಬೇಕು, ಎಲ್ಲರೂ ಸಿನಿಮಾ ನೋಡಬೇಕು ಎಂದು ಪಿಆರ್ಕೆ ಪ್ರೊಡಕ್ಷನ್ ಸಂಸ್ಥೆ ಸಿನಿಮಾ ಟಿಕೆಟ್ ದರದಲ್ಲಿ ಇಳಿಕೆ ಮಾಡಿತ್ತು. ನಂ.7 ರಿಂದ 10 ರವರೆಗೆ ಎಲ್ಲಾ ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ 56 ರೂ.
ಆದರೆ ಊರ್ವಶಿ ಚಿತ್ರಮಂದಿರದಲ್ಲಿ ಟೆಕೇಟ್ ಬೆಲೆಯಲ್ಲಿ ಇಳಿಕೆ ಮಾಡಡೆ, ಎಂದಿನಂತೆ 120 ರೂ. ನಲ್ಲೇ ಟಿಕೆಟ್ ಮಾರಾಟ ಮಾಡಲು ಮುಂದಾಗಿದ್ದಾರೆ. ಚಿತ್ರಮಂದಿರದ ಈ ನಡೆ ಪ್ರೇಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರೇಕ್ಷಕರು ಹಾಗೂ ಚಿತ್ರಮಂದಿರದ ಮಾಲೀಕರ ನಡುವೆ ಈ ವಿಚಾರ ವಾಗ್ವಾದಕ್ಕೆ ಕಾರಣವಾಗಿದೆ.
ಊರ್ವಶಿ ಚಿತ್ರಮಂದಿರದಲ್ಲಿ ಗಂಧದಗುಡಿ ಸಿನಿಮಾಗೆ 3 ಶೋ ನಿಗದಿ ಪಡಿಸಲಾಗಿತ್ತು. ಇದೀಗ ಪ್ರೇಕ್ಷಕರು ಹಾಗೂ ಚಿತ್ರಮಂದಿರದ ನಡುವೆ ಉಂಟಾಗಿರುವ ಗದ್ದಲದಿಂದಾಗಿ ಮೊದಲ ಶೋ ರದ್ದಾಗಿದೆ. ಸಿನಿಮಾದ ಟಿಕೆಟ್ ದರ ಇಳಿಕೆ ಮಾಡುವ ಸಲುವಾಗಿ ಎಲ್ಲಾ ಚಿತ್ರಮಂದಿರಗಳಿಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಎನ್ಓಸಿ ಕೊಟ್ಟಿದ್ದರು. ಆದರೆ ಊರ್ವಶಿ ಚಿತ್ರಮಂದಿರದವರ ಉದ್ದಟ್ಟತನ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.