ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ

ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈನ ಮಹೀಮ್‌ ಪ್ರದೇಶದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ದರ್ಗಾ ಒಂದನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಗುರುವಾರ ನೆಲಸಮಗೊಳಿಸಿತು.

ಯುಗಾದಿ ಹಬ್ಬದ ಪ್ರಯುಕ್ತ ವಿಡಿಯೋ ಒಂದರಲ್ಲಿ ಮಾತನಾಡಿದ್ದ ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ, “ಮುಂಬೈನ ಮಹೀಮ್‌ ಕರಾವಳಿ ಪ್ರದೇಶದಲ್ಲಿ 1-2 ವರ್ಷಗಳ ಹಿಂದೆ ದರ್ಗಾ ಇರಲಿಲ್ಲ.

ಆದರೆ ಈಗ ಇದಕ್ಕಿದ್ದಂತೆ ದರ್ಗಾ ನಿರ್ಮಿಸಲಾಗಿದೆ. ಸಮುದ್ರದ ತೀರದ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದು ಯಾರ ದರ್ಗಾ? ಅತಿಕ್ರಮವಾಗಿ ದರ್ಗಾ ನಿರ್ಮಿಸಿ ರುವುದು ಮಹಾರಾಷ್ಟ್ರ ಸರ್ಕಾರ ಮತ್ತು ಬಿಎಂಸಿ ವೈಫ‌ಲ್ಯಕ್ಕೆ ಸಾಕ್ಷಿಯಾಗಿದೆ. ಒಂದು ವೇಳೆ ದರ್ಗಾ ತೆರವುಗೊಳಿಸದಿದ್ದರೆ, ಆ ಸ್ಥಳದಲ್ಲಿ ಗಣಪತಿ ದೇಗುಲ ನಿರ್ಮಿಸ ಲಾಗುವುದು,’ ಎಂದು ಹೇಳಿದ್ದರು.

ಗುರುವಾರ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅತಿಕ್ರಮವಾಗಿ ನಿರ್ಮಿಸಲಾಗಿದ್ದ ದರ್ಗಾವನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಲಾಗಿದೆ.