ಖ್ಯಾತ ಹಿರಿಯ ನಟಿ ಖುಷ್ಬೂ ಸಹೋದರ ನಿಧನ

ಖ್ಯಾತ ಹಿರಿಯ ನಟಿ ಖುಷ್ಬೂ ಸಹೋದರ ನಿಧನ

ನವದೆಹಲಿ: ಖ್ಯಾತ ನಟಿ ಹಾಗೂ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರ ಸಹೋದರ ಅಬ್ದುಲ್ಲಾ ಖಾನ್ ನಿಧನರಾಗಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ನಟಿ ಖುಷ್ಬೂ, 'ನಿಮ್ಮ ಪ್ರೀತಿಪಾತ್ರರು ನಿಮ್ಮೊಂದಿಗೆ ಶಾಶ್ವತವಾಗಿ ಇರಬೇಕೆಂದು ನೀವು ಬಯಸುತ್ತೀರಿ, ಆದರೆ ಅವರಿಗೆ ವಿದಾಯ ಹೇಳುವ ಸಮಯ ಬರುತ್ತದೆ. ಪ್ರೀತಿಯ ಅಣ್ಣನ ಯಾತ್ರೆ ಇಂದಿಗೆ ಮುಗಿಯಿತು. ನನ್ನ ಸಹೋದರನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ' ಅಂತಾ ಹೇಳಿದ್ದಾರೆ.