ಕಬ್ಬಿಗೆ ದರ ನಿಗದಿಪಡಿಸದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ

ಕಬ್ಬಿಗೆ ದರ ನಿಗದಿಪಡಿಸಲು ಆಗ್ರಹಿಸಿ ಕಲಬುರಗಿಯಲ್ಲಿ ಕಬ್ಬು ಬೆಳೆಗಾರರು ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬು ಪಡೆದು ಸಕ್ಕರೆ ಉತ್ಪಾದಿಸಿ ಮಾರಾಟ ಮಾಡುತ್ತಿವೆ. ಆದರೆ ಕಬ್ಬಿಗೆ ಇನ್ನೂ ದರ ನಿಗದಿ ಮಾಡಿಲ್ಲ ಎಂದು ಕಾರ್ಖಾನೆ ಮಾಲೀಕರ ಸಭೆ ನಡೆಸದ ಡಿಸಿ ವಿವಿ ಜ್ಯೋತ್ಸ್ನಾ ವಿರುದ್ಧ ರೈತರ ಕೋಪ ವ್ಯಕ್ತಪಡಿಸಿದರು. ಪ್ರತಿ ಟನ್ ಕಬ್ಬಿಗೆ 2800 ರೂ.ದರ ನಿಗದಿಪಡಿಸಲು 22 ರವರೆಗೆ ಜಿಲ್ಲಾಡಳಿತಕ್ಕೆ ರೈತರು ಗಡುವು 22 ರೊಳಗೆ ದರ ನಿಗದಿಪಡಿಸದಿದ್ದಲ್ಲಿ ಡಿಸಿ ಕಚೇರಿ ಎದರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.