ರಾಜಸ್ಥಾನದಲ್ಲಿ ಪಿಕಪ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ: ಮೂವರು ಮಕ್ಕಳು ಸೇರಿ ಐವರ ಸಾವು
ರಾಜಸ್ಥಾನ: ಪಿಕಪ್ ವಾಹನ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಸೇರಿ ಐವರು ಸ್ಥಳದಲ್ಲಿಯೇ ಮೃತಪಟ್ಟಿರೋದಾಗಿ ತಿಳಿದು ಬಂದಿದೆ.
ರಾಜಸ್ಥಾನದ ಚುರು ಎಂಬಲ್ಲಿ ಇಂದು ಮುಂಜಾನೆ 1.30 ರಿಂದ 2 ಗಂಟೆಯ ಸುಮಾರಿಗೆ ಪಿಕಪ್ ಟ್ರಕ್ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಪಿಕಪ್ ಟ್ರಕ್ ನಲ್ಲಿ ಮೃತಪಟ್ಟಂತ ಐವರು ಹರಿಯಾಣದ ಮೂಲದವರು ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.
ಬೆಂಗ್ಳೂರು ಜನತೆಗೆ ಬಿಗ್ ಶಾಕ್..! ಬೇಸಿಗೆಯ ಬಿಸಿಲಿಗೆ ʼಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣ ಹೆಚ್ಚಳʼ
ಬೆಂಗಳೂರು : ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಹತ್ತಾರು ಆರೋಗ್ಯ ಸಮಸ್ಯೆಗಳು ಉದ್ಬವಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಇದೀಗ ಬಿಸಿಲಿಗೆ ಗ್ಯಾಸ್ಟ್ರೋಎಂಟರೈಟಿಸ್ ಪ್ರಕರಣ ಹೆಚ್ಚಳವಾಗಿದೆ.
ಗ್ಯಾಸ್ಟ್ರೋಎಂಟರೈಟಿಸ್ ಲಕ್ಷಣಗಳು :
ಗ್ಯಾಸ್ಟ್ರೋಎಂಟರೈಟಿಸ್ ಅಂದರೆ ಇದು ಜಠರ ಕರುಳಿನ ಕಾಯಿಲೆಯಾಗಿದ್ದು, ವಿಷಪೂರಿತ ಅಥವಾ ಕಲುಷಿತ ಆಹಾರ ಸೇವನೆ ಮತ್ತು ಬೇಸಿಗೆಯ ಹವಾಮಾನವು ಇದಕ್ಕೆ ಪ್ರಮುಖ ಕಾರಣವಾಗಿದೆ. ಶಾಖದ ವಾತಾವರಣದಲ್ಲಿ ಬ್ಯಾಕ್ಟೀರಿಯಗಳು ತ್ವರಿತವಾಗಿ ಹೆಚ್ಚಳವಾಗುತ್ತಿವೆ. ಹೆಚ್ಚಿದ ಜನರು ಬಿಸಿನಲ್ಲೇ ಓಡಾಡುತ್ತಾರೆ. ಜತೆಗೆ ಹೊರಗಡೆ ಊಟ ಮಾಡುತ್ತಾರೆ ಇದರಿಂದ ಈ ಆನಾರೋಗ್ಯ ಹೆಚ್ಚಾಗಿ ಕಾಡುತ್ತದೆ.
ಅಷ್ಟೇ ಅಲ್ಲದೇ ಐಟಿಸಿಟಿ ಬೆಂಗಳೂರಿನಲ್ಲಿ ಶೇಕಡಾ 40 ರಿಂದ 50 ರಷ್ಟು ಪ್ರಕರಣ ದಾಖಲಾಗುತ್ತಿದೆ ಈ ಕಾಯಿಲೆಯಿಂದ ಮಕ್ಕಳಿಗೆ ಅತಿಸಾರ, ಹೊಟ್ಟೆಸೆಳೆತ ಮತ್ತು ವಾಂತಿ ಬರುತ್ತದೆ. ಈ ಪ್ರಕರಣದ ಹೆಚ್ಚಳವು 10 ದಿನಗಳ ಹಿಂದೆ ಪ್ರಾರಂಭವಾಗಿದೆ ಎಂದು ಮಕ್ಕಳ ತಜ್ಞ ಡಾ. ಶಿವಪ್ರಕಾಶ ಸೋಸಲೆ ತಿಳಿಸಿದ್ದಾರೆ
ಎಚ್ಚರಿಕೆ ಕ್ರಮಗಳು :
ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಗೆ ಜನರು ಐಸ್‌ಕ್ರೀಮ್ ಹಾಗೂ ಪೇಸ್ಟ್ರಿ ಸೇವನೆಯನ್ನು ತಪ್ಪಿಸಬೇಕು ಏಕೆಂದರೆ ಅವರು ಕಲುಷಿತ ಕೈಗಳಿಂದ ಅವುಗಳನ್ನು ಸ್ಪರ್ಶಿಸಬಹುದು. ಇದು ಆಹಾರದಲ್ಲಿ ಬ್ಯಾಕ್ಟೀರಿಯಾವನ್ನು ಉಂಟುಮಾಡಬಹುದು. ಯಾವುದೇ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡುವ ಬದಲು ತ್ವರಿತವಾಗಿ ತಿನ್ನಬೇಕು, ಜೊತೆಗೆ ಹೊರಗಿನ ಕಲುಷಿತ ಆಹಾರಗಳನ್ನು ಸೇವಿಸಬಾರದು . ಬೇಸಿಗೆಯ ಈ ಕೆಟ್ಟ ವಾತಾವರಣದಲ್ಲಿ ಆರೋಗ್ಯದ ಕಾಳಜಿಯನ್ನು ವಹಿಸುವುದು ಅತ್ಯಗತ್ಯವಾಗಿದೆ. ಸ್ವಲ್ಪ ತಪ್ಪಿದ್ರೂ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.