ಕಾಲಮಿತಿಯಲ್ಲಿ ಬೇಡಿಕೆಗಳ ಈಡೇರಿಸಿ

ಕೋಲಾರ ಜಿಲ್ಲೆಯಲ್ಲಿ ಬಾಕಿ ಇರುವ ಪಿಟಿಸಿಎಲ್ ಕಾಯ್ದೆ ಪ್ರಕರಣಗಳಿಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು, ಭೂಮಂಜೂರಾತಿ ನಿಯಮಗಳನ್ನು ಒಳÀಗೊಂಡಂತೆ ತೋಟಿ, ತಳಾರಿ, ನೀರಗಂಟೆ ಇನಾಂತಿ ಭೂಮಿ ಮರುಮಂಜೂರಾರಿಗೆ ಅನುಮತಿ ನೀಡಬೇಕು, ದಲಿತರ ಸ್ಮಶಾನಕ್ಕೆ ಭೂಮಿ ಮೀಸಲಿಡಬೇಕು ಹೀಗೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಕಾಲಮಿತಿಯಲ್ಲಿ ಸಮಸ್ಯೆಗಳ ಇತ್ಯರ್ಥ ಪಡಿಸಬೇಕೆಂದು ಗಡುವು ನೀಡಿದರು.