ಶಿಗ್ಗಾಂವಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ
ಹಾವೇರಿ ಜಿಲ್ಲಾ ಶಿಗ್ಗಾಂವಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ವಿಶೇಷ ಕಾರ್ಯಕ್ರಮ ವಿತರಿಸಲಾಯಿತು. ಶಿಗ್ಗಾವಿಯ ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯಿಂದ ಸವಣೂರು ತಾಲೂಕಿನ 7000 ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಯಿತು. ಸಂಸ್ಥೆ ಅದ್ಯಕ್ಷ ಶಶಿಧರ ಯಲಿಗಾರ ಅವರಿಂದ ಚನ್ನಪ್ಪ ಕುನ್ನೂರ ಶಾಲೆ ಮಕ್ಕಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಸಂಸದರು ಮಂಜುನಾಥ ಕುನ್ನೂರ, ನಾಗರಾಜ ದ್ಯಾಮನಕೊಪ್ಪ, ನಾಗರಾಜ ಸುರಗೂಂಡ ಬಸವರಾಜ ಕುರಗೋಡಿ, ಈರಣ್ಣ ಬಡ್ಡಿ, ಮಲ್ಲಯ್ಯ ಹಿರೇಮಠ, ಕೊಟ್ರೇಶ ಮಾಸ್ತರ ಬೆಳಗಲಿ, ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.