ಬುದ್ದಿ ಹೇಳಬೇಕಾದ ಶಿಕ್ಷಕನಿಂದ ಪಲ್ಲಂಗದಾಟ?

ಶಿಕ್ಷಕನೊಬ್ಬ ಪರಸ್ತ್ರೀಯೊಂದಿಗೆ ಮಲಗಿಕೊಂಡು ತೆಗೆದುಕೊಂಡಿದ್ದ ತನ್ನದೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿಕೊಂಡು ಫಜೀತಿಗೀಡಾದ ವಿಲಕ್ಷಣ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಹೌದು.ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನವಲಿ ಗ್ರಾಮದ ನಿಂಗಪ್ಪ ಎಂಬ ಶಿಕ್ಷಕ ತನ್ನದೆ ಅಶ್ಲೀಲ ಫೋಟೋ ವಾಟ್ಸಪ್ ಗ್ರುಪ್ ನಲ್ಲಿ ಪೋಸ್ಟ ಮಾಡಿ ಪೇಚಿಗೆ ಸಿಲುಕಿಕೊಂಡಿದ್ದಾನೆ. ಇನ್ನು ಫೋಟೋ ಪೋಸ್ಟ ಮಾಡಿದ ಶಿಕ್ಷಕ ನಿಂಗಪ್ಪ ನವಲಿ ಗ್ರಾ.ಪಂ ಅಧ್ಯಕ್ಷೆಯೋರ್ವಳ ಪತಿಯಾಗಿದ್ದಾನೆ. ನಿಂಗಪ್ಪ ಮಾಡಿದ ಈ ಘನಂದಾರಿ ಕೆಲಸದಿಂದ ಗ್ರಾ.ಪಂ ಅಧ್ಯಕ್ಷೆಯಾಗಿರುವ ಪತ್ನಿಗೆ ತಲೆತಗ್ಗಿಸುವಂತಾಗಿದೆ. ಸದ್ಯ ಈ ವಿಷಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.