ಆರ್.ಎಸ್.ಎಸ್. ವಿರುದ್ದ ಟೀಕಿಸುವ ನಾಯಕರು ತಾಲಿಬಾನ್ ಪರವೇ ?
ಸಾಕಷ್ಟು ಅಧಿಕಾರಿಗಳಲ್ಲಿ ಆರ್ ಎಸ್ ಎಸ್ ಮೈಂಡ್ ಸೆಟ್ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಮಂತ್ರಿ, ರಾಷ್ಟ್ರಪತಿ,ಉಪರಾಷ್ಟ್ರಪತಿಗಳೆಲ್ಲ ಆರ್ ಎಸ್ ಎಸ್ ನವರೇ ಆಗಿದ್ದು, ಆರ್ ಎಸ್ ಎಸ್ ಯಾವುದೇ ಪಕ್ಷದ ಪರ ಇಲ್ಲ. ಅದು ದೇಶದ ಪರಂಪರೆ,ಹಿಂದೂ ಸಂಸ್ಕೃತಿ ಉಳಿವಿಗಾಗಿ ಹೋರಾಟ ಮಾಡ್ತಿದೆ ಎಂದರು. ದೇಶದಲ್ಲಿ ಸಾಂವಿಧಾನಿಕ ಹುದ್ದೆಯಲ್ಲಿ ಇರೋರು ಕೂಡಾ ಆರ್ ಎಸ್. ಎಸ್. ನವರಾಗಿದ್ದು, ಆರ್. ಎಸ್. ಎಸ್ ಇರದಿದ್ದರೆ ನಾಲ್ಕೈದು ಪಾಕಿಸ್ತಾನಗಳು ಹುಟ್ಟಿಕೊಳ್ಳುತ್ತಿದ್ದವು ಎಂದರು. ಇನ್ನು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾಂಪಿಟೇಶನ್ ಮೇಲೆ ಆರ್ ಎಸ್ ಎಸ್ ವಿರುದ್ಧ ಟೀಕೆ ಮಾಡುತ್ತಿದ್ದು, ತಾಕತ್ತಿದ್ದರೆ ಇವರಿಬ್ಬರು ತಾಲಿಬಾನ್ ಪರವೋ,ವಿರೋಧವೋ ಎಂದು ಹೇಳಲಿ ಎಂದು ಶೆಟ್ಟರ್ ಸವಾಲು ಹಾಕಿದರು.ಇನ್ನು ಡಿ ಕೆ ಶಿವಕುಮಾರ್ ಕುರಿತು ಉಗ್ರಪ್ಪ ಹಾಗೂ ಸಲೀಂ ಸಂಭಾಷಣೆ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್,ಆ ವಿಡಿಯೋ ನಾನು ನೋಡಿಲ್ಲ,ನೋಡದೇ ಅದಕ್ಕೆ ಪ್ರತಿಕ್ರಿಯಿಸುವುದು ತಪ್ಪಾಗುತ್ತೆ ಎಂದು ಜಗದೀಶ್ ಶೆಟ್ಟರ್ ಜಾರಿಕೊಂಡರು.