ಜಿಲ್ಲೆಯಲ್ಲಿ ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಪರಿಶೀಲನೆ..ಅಳ್ನವಾರ ತಾಲೂಕಿನಲ್ಲಿ ಅತಿವೃಷ್ಟಿ ಹಾನಿ ಪ್ರದೇಶಕ್ಕೆ ಭೇಟಿ

ಕಳೆದ ಜುಲೈ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದಾಗಿ ಹಾನಿಗೆ ಒಳಗಾದ ಧಾರವಾಡ ಜಿಲ್ಲೆಯ ಅಳ್ನಾವಾರ ತಾಲೂಕಿನ ಕಂಬಾರಗಣವಿ ಗ್ರಾಮದ ಇಂದಿರಮ್ಮ ಕೆರೆಯ ಪ್ರದೇಶಕ್ಕೆ ಇಂದು ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ಕಲಘಟಗಿಯ ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿಯವರು ಕೆರೆಯಿಂದ ಆದ ಹಾನಿಯ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಇನ್ನು ಭಾರತ ಸರ್ಕಾರದ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ ಜೆ, ಕೇಂದ್ರ ಹಣಕಾಸು ಮಂತ್ರಾಲಯದ ಉಪಕಾರ್ಯದರ್ಶಿ ಮಹೇಶಕುಮಾರ್ ಅವರನ್ನು ಒಳಗೊಂಡ ಅಧ್ಯಯನ ತಂಡ ಇದಾಗಿದೆ.. ಕೇಂದ್ರ ಅಧ್ಯಯನ ತಂಡವು ಅಳ್ನಾವಾರ ತಾಲೂಕಿನ ಎಳು ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೊದಲು ಕಂಬಾರಗಣವಿ ಊರಿನ ಜೈಭಾರತ್ ಕಾಲನಿಗೆ ಭೇಟಿ ನೀಡಿ ಮನೆಗಳ ಹಾನಿ ಕುರಿತು ಮಹಿತಿ ಪಡೆದುಕೊಂಡರು. ಅನಂತರ ಇಂದಿರಮ್ಮ ಕೆರೆಯಿಂದ ಹಾನಿಗೆ ಒಳಗಾದ ಕೃಷಿ ಭೂಮಿ ಸೇರಿದಂತೆ ರಸ್ತೆ, ಸೇತುವೆ ಹಾನಿ ಪ್ರದೇಶ ಪರಿಶೀಲನೆ ಮಾಡಿದರು. ಪರಿಶೀಲಿಸಿ ಬಳಿಕೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿ ನಿತೀಶ್ ಪಾಟೀಲ ಅವರು, ಅತೀ ವೃಷ್ಠಿ ಅಧ್ಯಯನದ ಮಾಹಿತಿ ನೀಡಿದ್ರು...