ಕಾರು-ಬೈಕ್ ಡಿಕ್ಕಿ, ಓರ್ವನ ಸಾವು
ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲಾ ರಟ್ಟಿಹಳ್ಳಿಯಲ್ಲಿ ಜರುಗಿದೆ. ವ್ಯಾಗನ್ ಆರ್. ಕಾರು ಹಾಗೂ ಬೈಕ್ ಮಧ್ಯ ಈ ಡಿಕ್ಕಿ ಸಂಭವಿಸಿದೆ. ಈ ಅವಗಡದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತನನ್ನು ರಟ್ಟೀಹಳ್ಳಿ ಪಟ್ಟಣದ 28ರ ವಯದ ಯುವಕ ನಟರಾಜ್ ವರದ್(28) ಎನ್ನಲಾಗಿದೆ. ತುಮ್ಮಿನಕಟ್ಟಿ ಹಾಗೂ ರಟ್ಟೀಹಳ್ಳಿ ಗ್ರಾಮಗಳ ಮಧ್ಯದಲ್ಲಿ ಈ ಅವಗಡ ನಡೆದಿದ್ದು ಸ್ಥಳಕ್ಕೆ ರಟ್ಟೀಹಳ್ಳಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ರಟ್ಟೀಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲು.