ಬ್ಯಾಂಕ್ ಲಾಕರ್ ನಿಯಮಗಳಲ್ಲಿ RBI ಮಹತ್ವದ ಬದಲಾವಣೆ

ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಆರ್‍ಬಿಐ ಮಹತ್ವದ ಬದಲಾವಣೆ ಮಾಡಿದೆ. ಈ ಪ್ರಕಾರ, ಬ್ಯಾಂಕ್ ಲಾಕರ್‍ನಲ್ಲಿ ಇಟ್ಟಿರುವ ವಸ್ತುಗಳು ಕಳೆದು ಹೋದಲ್ಲಿ ಬ್ಯಾಂಕ್‍ಗಳು ಗ್ರಾಹಕರಿಗೆ ಬಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ. ಆಸ್ತಿ ದಾಖಲೆಗಳು, ಚಿನ್ನಾ, ಆಭರಣ ಇತ್ಯಾದಿಗಳನ್ನು ಬ್ಯಾಂಕ್ ಲಾಕರ್‍ನಲ್ಲಿಡುವ ಗ್ರಾಹಕರಿಗೆ ಇದು ನೆರವಾಗಲಿದೆ. ಲಾಕರ್‍ನಲ್ಲಿಟ್ಟಿದ್ದ ವಸ್ತುಗಳು ಕಳವಾದ ಬಳಿಕ ಬ್ಯಾಂಕ್‍ನಿಂದ ಸೂಕ್ತ ಪರಿಹಾರ ದೊರೆಯದ ಬಗ್ಗೆ ಅನೇಕ ದೂರು ದಾಖಲಾದ ಹಿನ್ನೆಲೆ ಈ ಬದಲಾವಣೆ ತರಲಾಗಿದೆ