ದತ್ತಪೀಠ ಹಿಂದೂಗಳಿಗೆ ಒಪ್ಪಿಸಲು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಒತ್ತಾಯ
ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರವೇ ಉಳಿಯಲ್ಲ, ತಕ್ಷಣವೇ ಬಾಯಿ ಮುಚ್ಚಿಕೊಂಡು ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಬೇಕು ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಒತ್ತಾಯಿಸಿದರು. ಚಿಕ್ಕಮಗಳೂರಿನಲ್ಲಿ ದತ್ತಮಾಲಾಧಾರಣೆ ಬಳಿಕ ಮಾತನಾಡಿ, ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ದತ್ತಪೀಠ ಹಿಂದೂಗಳಿಗೆ ಸೇರಲಿದೆ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದು ಎರಡ್ಮೂರು ವರ್ಷವಾದ್ರು ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಿಲ್ಲ ರಾಜಕಾರಣ ಏನೇ ಇದ್ದರೂ ಧರ್ಮ-ಗುರುಗಳ ಜೊತೆ ಹುಡುಕಾಟ ಒಳ್ಳೆಯದಲ್ಲ ಸಮಿತಿ ಮಾಡುವ ಅಗತ್ಯವೇನಿದೆ, ಇಷ್ಟು ವರ್ಷ ಎಲ್ಲಾ ಕೋರ್ಟ್ ಕೊಟ್ಟ ತೀರ್ಪಿಗೆ ಕಿಮ್ಮತ್ತಿಲ್ವ ಎಂದು ಪ್ರಶ್ನಿಸಿದರು.