ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಹಿಂದೆ ದೊಡ್ಡ ಜಾಲವಿದೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಕುರಿತಂತೆ ಶಾಸಕ ಬಸನಗೌಡಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಕುಕ್ಕರ್ ಬಾಂಬ್ ಸ್ಪೋಟದ ಹಿಂದೆ ದೊಡ್ಡ ಜಾಲವಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಕ್ಕರ್ ಬಾಂಬ್ ಸ್ಪೋಟದ ಹಿಂದೆ ದೊಡ್ಡ ಜಾಲವಿದೆ. ಇದರಲ್ಲಿ ಮಂಗಳೂರು ಒಂದು ಸಣ್ಣ ಟಿಫನ್ ಬಾಕ್ಸ್ ಬಾಂಬ್ ಅಷ್ಟೇ. ಇದರ ಹಿಂದೆ ದೇವಸ್ಥಾನಗಳನ್ನು ನಾಶ ಮಾಡುವ ಹುನ್ನಾರವಿದೆ.ಈ ಮಕ್ಳು ದೇವಸ್ಥಾನದ ಮುಂದೆ ಹೂವು, ತೆಂಗಿನ ಕಾಯಿ ಮಾರುತ್ತಾ, ವ್ಯಾಪಾರದ ಹಣದಲ್ಲಿ ಜೀವನ ಸಾಗಿಸುತ್ತಾರೆ. ಆದರೆ ಅದೇ ದೇವಸ್ಥಾನದ ಮೇಲೆ ಬಾಂಬ್ ಹಾಕ್ತಾರೆ ಎಂದು ಕಿಡಿಕಾರಿದ್ದಾರೆ.
ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಏಕೆ ಮಾತನಾಡಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಮುಸ್ಲಿಂರನ್ನು ಸಿಎಂ ಮಾಡ್ತಾವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳ್ತಾರೆ. ಇವರೆಲ್ಲಾ ಮುಸ್ಲಿಮರನ್ನು ತುಷ್ಟೀಕರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.