ಸಾಲಿಗ್ರಾಮ ಕಲ್ಲುಗಳು ಎಂದು ಹೇಳಿಕೊಂಡು ಕೋಟಿಗಟ್ಟಲೆ ಹಣ ಸುಲಿಯುತ್ತಿದ್ದವರು ಅಂದರ್!

ಸಾಲಿಗ್ರಾಮ ಕಲ್ಲುಗಳು ಎಂದು ಹೇಳಿಕೊಂಡು ಕೋಟಿಗಟ್ಟಲೆ ಹಣ ಸುಲಿಯುತ್ತಿದ್ದವರು ಅಂದರ್!

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಸಾಲಿಗ್ರಾಮ ಕಲ್ಲುಗಳೆಂದು ಹೇಳಿಕೊಂಡು ಮಾರಾಟ ಮಾಡಿತ್ತಿದ್ದ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದಾರೆ.

ಇದೀಗ ಬಂಧನಕ್ಕೆ ಒಳಗಾದವರನ್ನು ಮನೋಜ್, ಆದಿತ್ಯಾ ಸಾಗರ್, ಎಂದು ಗುರುತಿಸಲಾಗಿದೆ.

ಇವರು ಸಾಲಿಗ್ರಾಮ ಕಲ್ಲುಗಳು ಎಂದು ಹೇಳಿ 2 ಕಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಅಂದ ಹಾಗೆ ಇವರು ಸಾಲಿಗ್ರಾಮ ಶಿಲೆ ಎಂದು ಹೇಳಿಕೊಂಡು ಮಾರಾಟ ಮಾಡಲು ಪ್ರಯತ್ನಿಸಿದ್ದು ಬರೋಬ್ಬರಿ 2 ಕೋಟಿ ರೂಪಾಯಿಗೆ!

ಆರೋಪಿಗಳು ರಾಜಾಜಿನಗರ ಠಾಣಾ ವ್ಯಾಪ್ತಿಯ ಖಾಸಗಿ ಹೋಟೆಲ್​ನಲ್ಲಿ ಮಾರಾಟಕ್ಕೆ ಯತ್ನಿಸಿದ್ದಾರೆ. ಗುಜರಾತಿನ ಗೋಮಾತಿ ನದಿಯಿಂದ ತಂದಿರುವ ಕಲ್ಲುಗಳು ಎಂದು ಬಿಂಬಿಸುತ್ತಿದ್ದರು. ಇವನ್ನು ಜೊತೆಗೆ ಇಟ್ಟುಕೊಂಡರೆ ಅದೃಷ್ಟ ಎಂದು ನಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದರು.

ಇವರು ನಡೆಸುತ್ತಿದ್ದ ದಂಧೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಎರಡು ಸಾಲಿಗ್ರಾಮ ಕಲ್ಲುಗಳ ಜಪ್ತಿ ಮಾಡಿದ್ದಾರೆ.