ಯುವಪಡೆಯಿಂದ ಪಂಚಮಸಾಲಿ ಸಮಾಜ ಬೆಳವಣಿಗೆ ಸಾಧ್ಯ

ಶಿಗ್ಗಾಂವಿ

ಶಿಗ್ಗಾಂವಿ ಪಟ್ಟಣದ ಶರೀಫ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ರಾಜ್ಯ ಯುವ ಘಟಕದ ಪದಾಧಿಕಾರಿಗಳ ಸಭೆ ನಡೆಯಿತು. ಗಿಡಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ  ಪಂಚಮಸಾಲಿ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ಮಂಜುನಾಥ ನವಲಗುಂದ ಅವರು ಮಾತನಾಡಿ, ಪಂಚಮಸಾಲಿ ಸಮಾಜದ ಸಂಘಟನೆಗೆ ಯುವಪಡೆ ಶ್ರಮವಹಿಸಿ ಸೇವೆ ಸಲ್ಲಿಸುವದು ಅವಶ್ಯವಾಗಿದೆ. ಆದ್ದರಿಂದ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಬೆಳೆವಣಿಗೆಯಾಗಲು ಸಾಧ್ಯವಿದೆ ಎಂದರು. ಈ ಸಂದರ್ಭದಲ್ಲಿ ಸೋಮು ಆಜೂರ, ರೇಣಕನಗೌಡ ಪಾಟೀಲ, ಗುರು ಅಣ್ಣಿಗೇರಿ, ಬಸಲಿಂಗಪ್ಪ ನರಗುಂದ, ಮುದಕಪ್ಪ ವನಹಳ್ಳಿ, ಶಿವು ಗುಡ್ಡಾಪುರ, ಶಿವಕುಮಾರ ಬಳಿಗಾರ, ಶಂಭು ನರ್ತಿ, ಬಿ.ಆರ್.ಕರಬಸಪ್ಪ, ಮಹೇಶ ಚನ್ನಂಗಿ, ಶಿವಾನಂದ ಕಲ್ಲೂರ, ನಟರಾಜ ಬಾದಾಮಿ, ವಸಂತಾ ಹುಲ್ಲತ್ತಿ, ಮಾಲತೇಶ ಬ್ಯಾಡಗಿ, ರಶ್ಮಿ ಡಾವಣಗೇರಿ, ಗೀತಾ ಚೌಡಕಿ, ಸೋಮು ಹೊನ್ನತ್ತಿ, ದಯಾನಂದ ಪಾಟೀಲ, ಅಮೋಘ ಹಾವೇರಿ,ಕಿರಣ ಯಲಿಗಾರ, ಪ್ರಶಾಂತ ಬಡ್ಡಿ, ಬಸವರಾಜ ಪಾಟೀಲ, ಶಂಕರಗೌಡ ಪಾಟೀಲ, ಹಲವರು ಪಂಚಮಸಾಲಿ ಯುವ ಮುಖಂಡರು ಉಪಸ್ಥಿತರಿದ್ದರು.