ಭಾರತದ ನೂತನ ʻಚುನಾವಣಾ ಆಯುಕ್ತʼರಾಗಿ ಅಧಿಕಾರ ವಹಿಸಿಕೊಂಡ ʻಅರುಣ್ ಗೋಯೆಲ್ʼ
ನವದೆಹಲಿ: ಮಾಜಿ ಬ್ಯೂರೋಕ್ರಾಟ್ ಅರುಣ್ ಗೋಯೆಲ್(Ex-bureaucrat Arun Goel) ಅವರು ಇಂದು ಭಾರತದ ನೂತನ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.
1985ರ ಬ್ಯಾಚ್‌ನ ಪಂಜಾಬ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಶನಿವಾರ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು.
ಈ ವರ್ಷದ ಮೇನಲ್ಲಿ ಸುಶೀಲ್ ಚಂದ್ರ ಅವರು ಸಿಇಸಿಯಾಗಿ ನಿವೃತ್ತರಾದ ನಂತ್ರ, ಚುನಾವಣಾ ಆಯುಕ್ತರ ಹುದ್ದೆ ಖಾಲಿಯಾಗಿತ್ತು. ಇದೀಗ ಆ ಸ್ಥಾನಕ್ಕೆ ಅರುಣ್ ಗೋಯೆಲ್ ಬಂದಿದ್ದಾರೆ. ಪಂಜಾಬ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಶುಕ್ರವಾರದವರೆಗೆ ದೊಡ್ಡ ಕೈಗಾರಿಕೆಗಳ ಕಾರ್ಯದರ್ಶಿಯಾಗಿದ್ದರು ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗೋಯೆಲ್ ಈಗ ಮುಖ್ಯ ಚುನಾವಣಾ ಆಯುಕ್ತ (CEC) ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನುಪ್ ಚಂದ್ರ ಪಾಂಡೆ ಅವರ ಸಾಲಿಗೆ ಸೇರಿದ್ದಾರೆ.