ಪಿಡಿಒ ಹುದ್ದೆ ಮೇಲ್ದರ್ಜೆ ಜೊತೆಗೆ ವೇತನವು ಹೆಚ್ಚಳ : ಸರ್ಕಾರ ಆದೇಶ

ಪಿಡಿಒ ಹುದ್ದೆ ಮೇಲ್ದರ್ಜೆ ಜೊತೆಗೆ ವೇತನವು ಹೆಚ್ಚಳ : ಸರ್ಕಾರ ಆದೇಶ

ಬೆಂಗಳೂರು; ಗ್ರಾಮ ಪಂಚಾಯತಿಗಳಿಗೆ ಮಂಜೂರಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳನ್ನು ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸುವ ಬಗ್ಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆ ಮುಂದುವರೆಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

1500 ಪಿಡಿಒ ಹುದ್ದೆಗಳನ್ನು 'ಗ್ರೂಪ್ ಸಿ' ನಿಂದ 'ಗ್ರೂಪ್ ಬಿ'ಗೆ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದೆ. 'ಗ್ರೂಪ್‌ ಸಿ'ನಲ್ಲಿನ 37,900-70,850 ರೂ. ವೇತನ ಶ್ರೇಣಿಯನ್ನು 40,900-78,200 ವೇತನ ಶ್ರೇಣಿಯ ಗ್ರೂಪ್-ಬಿ ಕಿರಿಯ ವೃಂದಕ್ಕೆ ಉನ್ನತೀಕರಿಸಲಾಗಿದೆ.

ಸರ್ಕಾರದ ಆದೇಶದಂತೆ ರಾಜ್ಯದಲ್ಲಿನ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಹುದ್ದೆಯಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ವೇತನ ಶ್ರೇಣಿ ರೂ.10,000-18,150 (ಪ್ರಸ್ತುತ ವೇತನ ಶ್ರೇಣಿ ರೂ. 37,900-70,850) ರಲ್ಲಿ ಸೃಜಿಸಿ ಆದೇಶಿಸಲಾಗಿದ್ದು, ಪ್ರಸ್ತುತ 6021 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಮಂಜೂರಾಗಿರುತ್ತವೆ.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮುಂಬಡ್ತಿಗೆ ಅವಕಾಶ ಹೆಚ್ಚಿಸುವ ದೃಷ್ಠಿಯಿಂದ ಒಟ್ಟು ಹುದ್ದೆಗಳ ಪೈಕಿ 1500 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ. 40,900-78,200 (ಗ್ರೂಪ್ ಬಿ ಕಿರಿಯ ವೃಂದ) ಹೊಂದಿರುವ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಲು ಹಾಗೂ ಉಳಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ. 37,900-70,850ರಲ್ಲಿಯೇ ಮುಂದುವರೆಸಲು ಸರ್ಕಾರವು ತೀರ್ಮಾನಿಸಿರುತ್ತದೆ.

ಆದ್ದರಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದದಲ್ಲಿ ಮಂಜೂರಾಗಿರುವ 6021 ಹುದ್ದೆಗಳ ಪೈಕಿ 1500 ಹುದ್ದೆಗಳನ್ನು ತಕ್ಷಣಕ್ಕೆ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಸರ್ಕಾರದ ಆದೇಶ ವಿವರಿಸಿದೆ. ಸರ್ಕಾರವು ಪ್ರಸ್ತಾವನೆಯನ್ನು ಒಪ್ಪಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಮಂಜೂರಾಗಿರುವ 6021 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಉನ್ನತೀಕರಿಸಿ/ ಪುನರ್ ಪದನಾಮೀಕರಿಸಿ ಆದೇಶಿಸಿದೆ. * ವೇತನ ಶ್ರೇಣಿ ರೂ. 37,900-70,850ರ ಗೂಪ್ ಸಿ ವೃಂದದ 1500 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಅನ್ವಯವಾಗುವಂತೆ ವೇತನ ಶ್ರೇಣಿ ರೂ. 40,900-78,200 (ಗ್ರೂಪ್ ಬಿ ಕಿರಿಯ ವೃಂದ)ರಲ್ಲಿ ಉನ್ನತೀಕರಿಸಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮರುಪದನಾಮೀಕರಿಸಿದೆ. Ads by * ಉಳಿದ 4521 ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶೇಣಿ ರೂ. 37,900-70,850 -(ಗ್ರೂಪ್ ಸಿ ವೃಂದದಲ್ಲಿ) ಮುಂದುವರಿಸಿದೆ. ಸರ್ಕಾರವು ತನ್ನ ಆದೇಶದಲ್ಲಿ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೃಂದಗಳಿಗೆ ನೇಮಕಾತಿ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.