'ಕೆಂಪೇಗೌಡ' ಕಾರ್ಯಕ್ರಮದಿಂದ ಬಿಜೆಪಿ ರಾಜಕೀಯ ಲಾಭ ಪಡೆದಿದೆ : ಎಂ.ಬಿ ಪಾಟೀಲ್ ಕಿಡಿ

'ಕೆಂಪೇಗೌಡ' ಕಾರ್ಯಕ್ರಮದಿಂದ ಬಿಜೆಪಿ ರಾಜಕೀಯ ಲಾಭ ಪಡೆದಿದೆ : ಎಂ.ಬಿ ಪಾಟೀಲ್ ಕಿಡಿ

ಬೆಂಗಳೂರು : ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಆಹ್ವಾನಿಸದ ಬಿಜೆಪಿ ಸರ್ಕಾರದ ವಿರುದ್ಧ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರೋಟೋಕಾಲ್ ಪ್ರಕಾರ ಕೆಂಪೇಗೌಡರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿಗಳ ಹೆಸರು ಇರಬೇಕಿತ್ತು, ಬಿಜೆಪಿ ಬಹಳ ದೊಡ್ಡ ತಪ್ಪು ಮಾಡಿದೆ.

ಮುಂದಿನ ಚುನಾವಣೆಯಲ್ಲಿ ಜನರು ಬುದ್ದಿ ಕಲಿಸುತ್ತಾರೆ, ತಮ್ಮ ಪಕ್ಷದ ಕಾರ್ಯಕ್ರಮ ಎಂದು ಬಿಂಬಿಸಲು ಹೊರಟಿದೆ. ರಾಜ್ಯ ಸರ್ಕಾರ ರಾಜಕೀಯ ಲಾಭ ಪಡೆಯಲು ಹೊರಟಿದೆ, ಕೆಂಪೇಗೌಡರ ರಾಜಕೀಯ ಕಾರ್ಯಕ್ರಮವನ್ನು ಸರ್ಕಾರ ಬರೀ ತನ್ನ ಲಾಭಕ್ಕಾಗಿ ಬಳಸಿಕೊಂಡಿದೆ ಎಂದು ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.

ಸರ್ಕಾರದ ವಿರುದ್ಧ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ
ಬಿಜೆಪಿಯ ಕೆಲವು ನಾಯಕರ ಸಂಕುಚಿತತೆಯೇ ಇದಕ್ಕೆ ಕಾರಣ, ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಬಿಜೆಪಿ ಹೃದಯ ವೈಶಾಲ್ಯತೆ ಮೆರೆಯಬೇಕಾಗಿತ್ತು. ಈ ದೇಶ, ರಾಜ್ಯಕ್ಕೆ ದೇವೇಗೌಡರ ಕೊಡುಗೆ ದೊಡ್ಡದಿದೆ. ಕಾರ್ಯಕ್ರಮಕ್ಕೆ ದೇವೇಗೌಡರಿಗೆ ಆಹ್ವಾನ ನೀಡಬೇಕಿತ್ತು ಎಂದು ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ರಾತ್ರೋರಾತ್ರಿ ಬೇಕಾಬಿಟ್ಟಿ ಕರೆದರೆ ಯಾರು ಹೋಗುತ್ತಾರೆ. ಪ್ರತಿಮೆ ಅನಾವರಣ, ವೇದಿಕೆ ಕಾರ್ಯಕ್ರಮಕ್ಕೆ ಪ್ರತ್ಯೇಕ ಆಹ್ವಾನ ಪತ್ರಿಕೆ ನೀಡಬೇಕಿತ್ತು. ವೇದಿಕೆ ಕಾರ್ಯಕ್ರದ ಆಹ್ವಾನ ಪತ್ರಿಕೆಯಲ್ಲೂ ದೇವೇಗೌಡರ ಹೆಸರು ಇದ್ದಿಲ್ಲ ಎಂದು ಹೇಳಿದ್ದಾರೆ.