ಭಟ್ಕಳದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 14 ಲಕ್ಷ ಹಣ ಜಪ್ತಿ, ನಾಲ್ವರು ಪೊಲೀಸ್ ವಶಕ್ಕೆ

ಉತ್ತರ ಕನ್ನಡ : ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿದ್ದು, ಎಲ್ಲಾ ಕಡೆ ವಾಹನ ತಪಾಸಣೆ ಮಾಡುತ್ತಿದ್ದಾರೆ.
ಭಟ್ಕಳದಲ್ಲಿ ವಾಹನ ತಪಾಸಣೆ ನಡೆಸಿದ ಪೊಲೀಸರು ಬರೋಬ್ಬರಿ 14 ಲಕ್ಷ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕೊಪ್ಪಳದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 16 ಕೆಜಿ ಬೆಳ್ಳಿ, ಹಣ ಜಪ್ತಿ, ಇಬ್ಬರು ಪೊಲೀಸರ ವಶಕ್ಕೆ
ಕೊಪ್ಪಳ : ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆಯಿಲ್ಲದ ಬೆಳ್ಳಿ, ಹಣ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ನಗರದೆಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸಿ, ರಸ್ತೆಯಲ್ಲಿ ಓಡಾಡುವ ವಾಹವನ್ನು ತಡೆದು ಪರಿಶೀಲನೆ ನಡೆಸಲಾಗುತಿದ್ದು, ಈ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ 16 ಕೆಜಿ ಬೆಳ್ಳಿ, ಹಣ ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಸುಮಾರು 9.67 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತು ಸೇರಿ 1.10 ಲಕ್ಷ ಹಣವನ್ನ ಜಪ್ತಿ ಮಾಡಲಾಗಿದೆ. ಉದ್ಯಮಿಗಳಾದ ಕೈಲಾಸ್ ಜೈನ್, ದೇವಿಚಂದ್ರ ಜೈನ್ ಎಂಬುವವರು ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬೆಳ್ಳಿ, ಹಣ ತೆಗೆದುಕೊಂಡು ಬರುತ್ತಿದ್ದರು . ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಇಬ್ಬರನ್ನ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.