ಇಂದು, ನಾಳೆ ಬೆಂಗಳೂರಿನಲ್ಲಿ 'ಬಿಜೆಪಿ ಕೋರ್​ ಕಮಿಟಿ' ಸಭೆ : ಸಭೆಯಲ್ಲಿ 'ಅಭ್ಯರ್ಥಿಗಳ ಆಯ್ಕೆ, ಪಟ್ಟಿ ಕುರಿತು ಚರ್ಚೆ'

ಇಂದು, ನಾಳೆ ಬೆಂಗಳೂರಿನಲ್ಲಿ 'ಬಿಜೆಪಿ ಕೋರ್​ ಕಮಿಟಿ' ಸಭೆ : ಸಭೆಯಲ್ಲಿ 'ಅಭ್ಯರ್ಥಿಗಳ ಆಯ್ಕೆ, ಪಟ್ಟಿ ಕುರಿತು ಚರ್ಚೆ'

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ರಣತಂತ್ರ ರೂಪಿಸಲು ಇಂದು, ನಾಳೆ ಬೆಂಗಳೂರಿನಲ್ಲಿ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದೆ. ಈಗಾಗಲೇ ಭರ್ಜರಿ ಸಿದ್ದತೆ ನಡೆಸಲಾಗುತ್ತಿದೆ.

ಇಂದು ಮತ್ತು ನಾಳೆ ಖಾಸಗಿ ಹೋಟೆಲ್‌ನಲ್ಲಿ ಕೋರ್‌ ಕಮಿಟಿ ಸಭೆಯ ನಡೆಯಲಿದೆ.

ಈಗಾಗಲೇ ವಿವಿಧ ಜಿಲ್ಲೆಗಳಿಂದ ಕೋರ್‌ ಕಮಿಟಿ ಸದಸ್ಯರು ಆಗಮಿಸುತ್ತಿದ್ದಾರೆ. ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಕುರಿತು ನಾಯಕರ ಚರ್ಚೆ ನಡೆಯಲಿದೆ. ಜಿಲ್ಲಾವಾರು ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಸಮಲೋಚನೆ ನಡೆಯಲಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ಮೊದಲಿಗೆ ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಸಭೆ ನಡೆಯಲಿದೆ. 20 ಜಿಲ್ಲೆಯ ಮುಖಂಡರು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.