3ನೇ ಮದುವೆಯಾಗಿ ಇಬ್ಬರು ಹೆಂಡತಿಯರಿಗೆ ಶಾಕ್ ಕೊಟ್ಟ ಯೂಟ್ಯೂಬರ್ ಅರ್ಮಾನ್!

ಯೂಟ್ಯೂಬ್, ಇನ್ಸ್ಟಾ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಫುಲ್ ಆಯಕ್ಟಿವ್ ಆಗಿರುವ ಹೈದರಾಬಾದ್ ಮೂಲದ ಅರ್ಮಾನ್ ಮಲಿಕ್ ಆಗಾಗ ಜನರಿಗೆ ಶಾಕ್ ಕೊಡುತ್ತಿರುತ್ತಾರೆ. ಆದ್ರೆ ಈ ಬಾರಿ ತನ್ನ ಮುದ್ದಾದ ಇಬ್ಬರು ಗರ್ಭಿಣಿ ಪತ್ನಿಯರಿಗೆ ಗಾಬರಿಯಾಗುವಂತೆ ಮಾಡಿ, ಮನೆ ಬಿಟ್ಟು ಹೋಗುವಂತಹ ಶಾಕ್ ಕೊಟ್ಟಿದ್ದಾರೆ. ಯೂಟ್ಯೂಬ್ ಅರ್ಮಾನ್ ಮಲಿಕ್ 3ನೇ ಮದುವೆ ಆಗಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ನಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಮಹಿಳೆಯೊಂದಿಗೆ 3ನೇ ವಿವಾಹವಾಗಿ ಹೂವಿನ ಹಾರ ಹಾಕಿಕೊಂಡು ಮನೆಗೆ ಬಂದಿದ್ದಾರೆ. ಏನಿದು ಎಂದು ಅರ್ಮಾನ್ನ ಇಬ್ಬರು ಪತ್ನಿಯರಾ ಕ್ರಿತಿಕಾ ಮತ್ತು ಪಾಯಲ್ ಅರ್ಮಾನ್ರನ್ನ ಪ್ರಶ್ನಿಸಿದ್ದಾರೆ. 3ನೇ ಮದುವೆಯಾಗಿದ್ದೇನೆ ಎಂದಿದ್ದಾನೆ. ಇದರಿಂದ ಫುಲ್ ಗಾಬರಿಯಾದ ಇಬ್ಬರು ಪತ್ನಿಯರು ಮನೆ ಬಿಟ್ಟು ಹೋಗುವಂತೆ ಅವಾಜ್ ಹಾಕಿ, ಆ 3ನೇ ಪತ್ನಿಗು ಬುದ್ಧಿವಾದ ಹೇಳಿ ಮನೆಯಿಂದ ಹೊರ ನೂಕಲು ಯತ್ನಿಸಿದ್ದಾರೆ. ಆದ್ರೆ ಆಕೆ ಹೊರ ಹೋಗಿಲ್ಲ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು. ಬಳಿಕ ಕ್ರಿತಿಕಾ ಮತ್ತು ಪಾಯಲ್ ಸೇರಿ ನೀನು ಒಳ್ಳೆಯ ಗಂಡ ಆಗಲಿಲ್ಲ, ಒಳ್ಳೆಯ ಅಪ್ಪನೂ ಆಗಲಿಲ್ಲ ಎಂದು ಪತ್ರ ಬರೆದು ರಾತ್ರಿ ಮನೆ ಬಿಟ್ಟು ಹೋಗಿದ್ರು. ಇದು ಕೂಡ ವೈರಲ್ ಆಗಿತ್ತು. ಆದ್ರೆ ಈ ಬಗ್ಗೆ ಸ್ಪಷ್ಟನೇ ಕೊಟ್ಟಿರೋ ಅರ್ಮಾನ್ ಮಲಿಕ್, ಇದೇಲ್ಲಾ ಫ್ರಾಂಕ್ ಯಾವುದು ನಿಜವಲ್ಲ ಎಂದು ಹೇಳಿದ್ದಾರೆ. ಸ್ವತಹ ಪತ್ನಿಯರನ್ನು ಕೂಡ ಯಾಮಾರಿಸಿದ್ದ ಅರ್ಮಾನ್, ಅವರಿಗೂ ವಿಷಯ ಏನೆಂದು ತಿಳಿಸಿ ವಾಪಸ್ ತನ್ನ ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾರೆ.